ರಾಯಚೂರು: ಬಾಲ ಕಾರ್ಮಿಕರನ್ನು ಹೊಲದಲ್ಲಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ ವೇಳೆ ದಾಳಿ ಮಾಡಿ 32 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಜಿಲ್ಲೆಯ ಸಿರವಾರ ತಾಲೂಕಿನ ಬಳಗಾನೂರು ಕ್ರಾಸ್ ಬಳಿ ಮಕ್ಕಳ ರಕ್ಷಣಾ ಘಟಕ, ತಹಶೀಲ್ದಾರ್, ಪೊಲೀಸ್ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 32 ಬಾಲ ಕಾರ್ಮಿಕರನ್ನ ರಕ್ಷಣೆ ಮಾಡಿದ್ದಾರೆ.
ಹೊಲದಲ್ಲಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 32 ಬಾಲ ಕಾರ್ಮಿಕರ ರಕ್ಷಣೆ - Child labor strategist
ಇಲ್ಲಿನ ಕವಿತಾಳ ವ್ಯಾಪ್ತಿಯಲ್ಲಿ ಬರುವ ನಾನಾ ಗ್ರಾಮಗಳಿಂದ ಹೊಲದಲ್ಲಿ ಕೂಲಿ ಕೆಲಸಕ್ಕಾಗಿ 7 ಗೂಡ್ಸ್ ವಾಹನದಲ್ಲಿ ಬಾಲಕರನ್ನು ಕರೆದುಕೊಂಡು ಹೋಗುತ್ತಿದ್ದರು. ಇದರ ಮಾಹಿತಿ ಆಧಾರಿಸಿ ಹಠಾತ್ ದಾಳಿ ನಡೆಸಿದ ಅಧಿಕಾರಿಗಳು, 7 ವಾಹನಗಳನ್ನು ಜಪ್ತಿ ಮಾಡಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಹೊಲದಲ್ಲಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 32 ಬಾಲ ಕಾರ್ಮಿಕರ ರಕ್ಷಣೆ
ಕವಿತಾಳ ವ್ಯಾಪ್ತಿಯಲ್ಲಿ ಬರುವ ನಾನಾ ಗ್ರಾಮಗಳಿಂದ ಹೊಲದಲ್ಲಿ ಕೂಲಿ ಕೆಲಸಕ್ಕಾಗಿ 7 ಗೂಡ್ಸ್ ವಾಹನದಲ್ಲಿ ಬಾಲಕರನ್ನು ಕರೆದುಕೊಂಡು ಹೋಗುತ್ತಿದ್ದರು. ಇದರ ಮಾಹಿತಿ ಆಧಾರಿಸಿ ಹಠಾತ್ ದಾಳಿ ನಡೆಸಿದ ಅಧಿಕಾರಿಗಳು, 7 ವಾಹನಗಳನ್ನು ಜಪ್ತಿ ಮಾಡಿ ಬಾಲ ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಇನ್ನು ದಾಳಿ ವೇಳೆ ಪತ್ತೆಯಾಗಿರುವ ಬಾಲ ಕಾರ್ಮಿಕರನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ತಿಳಿಸಿದ್ದಾರೆ.