ರಾಯಚೂರು: ಲಿಂಗಸುಗೂರು ತಾಲೂಕು ಕೋಠ ಗ್ರಾಮದ ಹಳ್ಳದಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೂವರು ಸಾವನ್ನಪ್ಪಿದ್ದಾರೆ.
ಹಳ್ಳದ ಗುಂಡಿಯಲ್ಲಿ ಕಾಲು ಜಾರಿಬಿದ್ದು ಮೂವರು ಸಾವು... ಬಟ್ಟೆ ತೊಳೆಯಲು ಹೋದಾಗ ದುರಂತ - ಬಟ್ಟೆ ತೊಳೆಯಲು ಹೋಗಿದ್ದ ಮೂವರು ಹಳ್ಳಕ್ಕೆ ಬಿದ್ದು ಸಾವು
ಬಟ್ಟೆ ತೊಳೆಯಲು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೂವರು ಸಾವಿಗೀಡಾಗಿರುವ ಘಟನೆ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ.
ಬಟ್ಟೆ ತೊಳೆಯಲು ಹೋದಾಗ ದುರಂತ
ಮೃತರನ್ನು ತಾಯಿಪಾರ್ವತಿ (30), ಅವರ ಮಗ ಅರ್ಜುನ (9) ಹಾಗೂ ಪಾರ್ವತಿ ಅಕ್ಕನ ಮಗಳು ಶಿಲ್ಪಾ (10) ಎಂದು ಗುರುತಿಸಲಾಗಿದೆ. ಅಹೋರಾತ್ರಿ ಶೋಧ ಕಾರ್ಯ ನಡೆಸಿದ ಗ್ರಾಮಸ್ಥರು ಭಾನುವಾರ ಬೆಳಗಿನ ಜಾವ ಮೂವರ ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆ ಪಿಎಸ್ಐ ಮುದ್ದುರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
Last Updated : Aug 30, 2020, 9:44 AM IST