ರಾಯಚೂರು: ಜಿಲ್ಲೆಯಲ್ಲಿಂದು ಕೊರೊನಾ ರಣಕೇಕೆ ಹಾಕಿದೆ. ಒಂದೇ ದಿನ 257 ಕೊರೊನಾ ಪ್ರಕರಣಗಳು ವರದಿಯಾಗಿವೆ. ಈವರೆಗೆ 17 ಮಂದಿ ಸೋಂಕಿತರು ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 1395ಕ್ಕೆ ಏರಿಕೆಯಾಗಿದೆ.
ರಾಯಚೂರಿನಲ್ಲಿಂದು 257 ಕೊರೊನಾ ಪ್ರಕರಣಗಳು ಪತ್ತೆ: ಸೋಂಕಿತರ ಸಂಖ್ಯೆ 1,395ಕ್ಕೆ ಏರಿಕೆ - 257 corona cases
ರಾಯಚೂರಿನಲ್ಲಿಂದು 257 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1395 ಸೋಂಕಿತರ ಪೈಕಿ 783 ಸೋಂಕಿತರು ಗುಣಮುಖರಾಗಿದ್ದಾರೆ. 17 ಜನ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲಾಸ್ಪತ್ರೆ
ಇಂದು ಪತ್ತೆಯಾಗಿರುವ ಸೋಂಕಿತರಲ್ಲಿ ರಾಯಚೂರು ತಾಲೂಕಿನಲ್ಲಿ-134, ಸಿಂಧನೂರು -46, ಮಾನವಿ- 43, ಲಿಂಗಸುಗೂರು- 30, ದೇವದುರ್ಗ ತಾಲೂಕಿನಲ್ಲಿ 4 ಜನ ಸೋಂಕಿತರು ಪತ್ತೆಯಾಗಿದ್ದಾರೆ. 1395 ಸೋಂಕಿತರ ಪೈಕಿ 783 ಜನರು ಗುಣಮುಖರಾಗಿದ್ದಾರೆ.
ಸೋಂಕಿತರು ಕ್ವಾರಂಟೈನ್ ಕೇರ್ ಹಾಗೂ ಐಸೋಲೋಷನ್ ವಾರ್ಡ್ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.