ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿಂದು 25 ಜನರಲ್ಲಿ ಕೊರೊನಾ ಪತ್ತೆ: ಸೋಂಕಿತರ ಸಂಖ್ಯೆ 656ಕ್ಕೆ ಏರಿಕೆ

ರಾಯಚೂರಿನಲ್ಲಿ ಇಂದು 25 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 656ಕ್ಕೆ ಏರಿಕೆಯಾಗಿದೆ. ಸ್ಥಳೀಯ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ 125 ಜನ, ಕ್ವಾರಂಟೈನ್‌ನಲ್ಲಿ 61 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

By

Published : Jul 10, 2020, 8:52 PM IST

ಕೊರೊನಾ ಸೋಂಕು
ಕೊರೊನಾ ಸೋಂಕು

ರಾಯಚೂರು: ಜಿಲ್ಲೆಯಲ್ಲಿ ಇಂದು 25 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 656ಕ್ಕೆ ಏರಿಕೆಯಾಗಿದೆ.

ಇಂದು ಸೋಂಕಿತರಲ್ಲಿ ರಾಯಚೂರು ತಾಲೂಕಿನ 15, ಸಿಂಧನೂರು ತಾಲೂಕಿನ 9, ದೇವದುರ್ಗ ತಾಲೂಕಿನ ಒಬ್ಬರಿದ್ದಾರೆ. ಈವರೆಗೆ ಸೋಂಕಿನಿಂದ 463 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು,186 ಕೊರೊನಾ ಸಕ್ರಿಯ ಪ್ರಕರಣಗಳಿವೆ.

ಸ್ಥಳೀಯ ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ 125 ಜನ, ಕ್ವಾರಂಟೈನ್‌ನಲ್ಲಿ 61 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೂ 7 ಜನ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details