ರಾಯಚೂರು:ಜಿಲ್ಲೆಯ ಕ್ವಾರಂಟೈನ್ ಕೇಂದ್ರಗಳಿಂದ 206 ಮಂದಿ ಪರಾರಿಯಾಗಿದ್ದಾರೆ ಎನ್ನುವ ವಿಚಾರ ಸದ್ಯ ಜಿಲ್ಲಾದ್ಯಂತ ಆತಂಕ ಮೂಡಿಸಿತ್ತು. ಆದರೆ, ಮೊಬೈಲ್ ಸಂಖ್ಯೆ ತಪ್ಪು ನೀಡಿರುವುದರಿಂದ ಈ ಎಡವಟ್ಟಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಬೇರೆ ರಾಜ್ಯದಿಂದ ಬಂದ ವಲಸೆ ಕಾರ್ಮಿಕರನ್ನ ಜಿಲ್ಲಾಡಳಿತ ಕ್ವಾರೆಂಟೈನ್ ಒಳಪಡಿಸಲಾಗಿತ್ತು. ಈ ವೇಳೆ, ಕ್ವಾರೆಂಟೈನ್ನಲ್ಲಿರುವ ಮಾಹಿತಿ ಸಂಗ್ರಹ ಮಾಡಿಕೊಳ್ಳಲಾಗುತ್ತಿದ್ದು, ಮೊಬೈಲ್ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಆದರೆ, ಕ್ವಾರೆಂಟೈನ್ ಒಳಗಾದವರು ತಪ್ಪು ಮೊಬೈಲ್ ಸಂಖ್ಯೆ ಅಥವಾ ಬೇರೆಯವರ ಸಂಖ್ಯೆಯನ್ನು ನೀಡಿದ್ದಾರೆ. ಇದರಿಂದ ಬೆಂಗಳೂರಿನಲ್ಲಿ ನಡೆಸಿದ ಬಯೋ ಫೇನ್ಚಿಂಗ್ನಲ್ಲಿ 206 ಜನ ಪರಾರಿಯಾಗಿರುವಂತೆ ಗೊಂದಲ ಮೂಡಿತ್ತು