ರಾಯಚೂರು: ಜಿಲ್ಲೆಯಲ್ಲಿ ಇಂದು 16 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 631ಕ್ಕೆ ಏರಿಕೆಯಾಗಿದೆ.
ರಾಯಚೂರಿನಲ್ಲಿ ಇಂದು 16 ಜನರಿಗೆ ಅಂಟಿದ ಕೊರೊನಾ - Raichur corona news
ರಾಯಚೂರಿನಲ್ಲಿಂದು 16 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, 183 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಒಪೆಕ್ ಆಸ್ಪತ್ರೆಯಲ್ಲಿ 146 ಮತ್ತು ಕ್ವಾರಂಟೈನ್‌ನಲ್ಲಿ 37 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೂ ಗುಣಮುಖರಾದ 442 ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ರಾಜೀವ್ ಗಾಂಧಿ ಆಸ್ಪತ್ರೆ
ಸೋಂಕಿತರಲ್ಲಿ ರಾಯಚೂರು, ದೇವದುರ್ಗ ತಾಲೂಕಿನ ತಲಾ 5, ಮಾನ್ವಿ ತಾಲೂಕಿನ 3, ಸಿಂಧನೂರು ತಾಲೂಕಿನ 2 ಹಾಗೂ ಲಿಂಗಸುಗೂರು ತಾಲೂಕಿನವರು ಒಬ್ಬರಿದ್ದಾರೆ. ಜಿಲ್ಲೆಯಲ್ಲಿ 183 ಕೊರೊನಾ ಸಕ್ರಿಯ ಪ್ರಕರಣಗಳಿವೆ.
ಒಪೆಕ್ ಆಸ್ಪತ್ರೆಯಲ್ಲಿ 146 ಮತ್ತು ಕ್ವಾರಂಟೈನ್‌ನಲ್ಲಿ 37 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೂ ಗುಣಮುಖರಾದ 442 ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಯೋಗಾಲಯದಿಂದ ಇನ್ನೂ 2,447 ಜನರ ವರದಿ ಬರುವುದು ಬಾಕಿಯಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಿದೆ.