ರಾಯಚೂರು:ಜಿಲ್ಲೆಯಲ್ಲಿ ಇಂದು 140 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇಂದು ರಾಯಚೂರು ತಾಲೂಕಿನಲ್ಲಿ 66, ಮಾನವಿ 19, ಲಿಂಗಸೂಗೂರು 22, ಸಿಂಧನೂರು 21, ದೇವದುರ್ಗ 12 ಇಂದು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7,162 ಕ್ಕೆ ಏರಿಕೆಯಾಗಿದೆ.
ಮೃತರ ವಿವರ:
ಕೊರೊನಾ ಸೋಂಕಿಗೆ ಇಂದು ಇಬ್ಬರು ಮೃತಪಟ್ಟಿದ್ದು, ಇದುವರೆಗೆ ಮಹಾಮಾರಿಗೆ ಬಲಿಯಾದವರ ಸಂಖ್ಯೆ 88ಕ್ಕೆ ತಲುಪಿದೆ.
ಗುಣಮುಖ :
ಜಿಲ್ಲೆಯಲ್ಲಿ ಇದುವರಗೆ ಒಟ್ಟು 5663 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1411 ಪ್ರಕರಣಗಳು ಸಕ್ರಿಯವಾಗಿವೆ.
ಕೋವಿಡ್ ಪರೀಕ್ಷೆ :
ಜಿಲ್ಲೆಯಿಂದ ಈವರೆಗೆ 75,956 ಜನರ ಮಾದರಿಯನ್ನು ಕೊರೊನಾ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅವುಗಳಲ್ಲಿ 67,031 ವರದಿಗಳು ನೆಗೆಟಿವ್ ಬಂದಿದೆ. ಉಳಿದ 1,369 ಸ್ಯಾಂಪಲ್ಗಳ ಫಲಿತಾಂಶ ಬರಬೇಕಿದೆ. ಫಿವರ್ ಕ್ಲಿನಿಕ್ ಗಳಲ್ಲಿಂದು 827 ಜನರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗಿದೆ.
ಇತರೆ ವಿವರ :
ರಾಯಚೂರು ತಾಲೂಕಿನ ಸಾಂಸ್ಥಿಕ ಕ್ವಾರಂಟೈನ್ನಲ್ಲಿ 89, ಸಿಂಧನೂರು ತಾಲೂಕು ಸಾಂಸ್ಥಿಕ ಕ್ವಾರಂಟೈನ್ನಲ್ಲಿ 67 ಹಾಗೂ ಲಿಂಗಸೂಗೂರು ತಾಲೂಕು ಸಾಂಸ್ಥಿಕ ಕ್ವಾರಂಟೈನ್ನಲ್ಲಿ 82 ಮತ್ತು ದೇವದುರ್ಗ ತಾಲೂಕು ಸಾಂಸ್ಥಿಕ ಕ್ವಾರಂಟೈನ್ನಲ್ಲಿ 71 ಜನರು ಸೇರಿದಂತೆ ಒಟ್ಟು 455 ಜನರನ್ನು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.