ರಾಯಚೂರು:ಜಿಲ್ಲೆಯಲ್ಲಿಇಂದು 14 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 670ಕ್ಕೆ ತಲುಪಿದೆ.
14 ಜನರಿಗೆ ಸೋಂಕು ದೃಢ... ಸೋಂಕಿತರ ಸಂಖ್ಯೆ 670ಕ್ಕೆ ಏರಿಕೆ - ರಾಯಚೂರು ಕೊರೊನಾ ನ್ಯೂಸ್
ಜಿಲ್ಲೆಯಲ್ಲಿ ದಿನೇ-ದಿನೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇಂದು 14 ಜನರಿಗೆ ಸೋಂಕು ತಗುಲಿದೆ. 670 ಸೋಂಕಿತರ ಪೈಕಿ 466 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ.
Raichur corona case
ಇಂದು ಪತ್ತೆಯಾಗಿರುವ 14 ಪ್ರಕರಣಗಳಲ್ಲಿ ರಾಯಚೂರಿನ-12 ಜನ, ಸಿಂಧನೂರಿನ-2 ಜನರಿಗೆ ಸೋಂಕು ತಗುಲಿರುವುದು ವರದಿಯಾಗಿವೆ. ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 466 ಮಂದಿ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇನ್ನುಳಿದ 196 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಇಂದು ಪತ್ತೆಯಾಗಿರುವ ಸೋಂಕಿತರನ್ನು ಚಿಕಿತ್ಸೆಗೆಂದು ಐಸೋಲೋಷನ್ ವಾರ್ಡ್ಗೆ ದಾಖಲಿಸಿ, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.