ರಾಯಚೂರು:ಜಿಲ್ಲೆಯಲ್ಲಿ ಇಂದು 125 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,260ಕ್ಕೆ ತಲುಪಿದೆ. ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 4,917 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇಂದು ದೇವದುರ್ಗ ತಾಲೂಕಿನಿಂದ 177, ಲಿಂಗಸೂಗೂರು ತಾಲೂಕಿನಿಂದ 147, ಮಾನ್ವಿ ತಾಲೂಕಿನಿಂದ 156, ಸಿಂಧನೂರು ತಾಲೂಕಿನಿಂದ 164 ಮತ್ತು ರಾಯಚೂರು ತಾಲೂಕಿನಿಂದ 211 ಸೇರಿದಂತೆ ಒಟ್ಟು 855 ಜನರ ಮಾದರಿಯನ್ನು ಕೊರೊನಾ ಶಂಕೆ ಹಿನ್ನೆಲೆಯಲ್ಲಿ ವರದಿಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಇಂದು ಇಬ್ಬರು ಮೃತಪಡುವ ಮೂಲಕ ಮೃತರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ.