ಕರ್ನಾಟಕ

karnataka

By

Published : Aug 15, 2019, 9:31 PM IST

ETV Bharat / state

ಪ್ರವಾಹದ ವೇಳೆ ಅಂಬ್ಯುಲೆನ್ಸ್​ಗೆ ದಾರಿ ತೋರಿಸಿದ ಬಾಲಕನಿಗೆ ಜಿಲ್ಲಾಡಳಿತದಿಂದ ಶೌರ್ಯ ಪ್ರಶಸ್ತಿ!

ತುಂಬಿ ಹರಿಯುತ್ತಿದ್ದ ಕೃಷ್ಣಾ ನದಿ ಪ್ರವಾಹದಲ್ಲಿ ಅಂಬುಲೆನ್ಸ್ ಗೆ ದಾರಿ ತೋರಿಸಿ ಸಾಹಸ ಮೆರೆದ ಬಾಲಕನಿಗೆ ರಾಯಚೂರು ಜಿಲ್ಲಾಡಳಿತದಿಂದ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಸಾಹಸ ಸೇವಾ ಪ್ರಶಸ್ತಿ/ bravery award

ರಾಯಚೂರು:ಕೃಷ್ಣಾ ನದಿ ಪ್ರವಾಹದ ವೇಳೆ ಮುಳುಗಿದ್ದ ಸೇತುವೆ ಮೇಲೆ ಅಂಬ್ಯುಲೆನ್ಸ್​ ದಾಟಿ ಹೋಗಲು ಸರಿಯಾಗಿ ರಸ್ತೆ ತೋರಿಸಿ ಶೌರ್ಯ ಮೆರೆದ ಬಾಲಕನಿಗೆ ಇದೀಗ ಅಲ್ಲಿನ ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಯಚೂರು ಜಿಲ್ಲೆಯ ದೇವದುರ್ಗದ ಹಿರೇರಾಯನಕುಂಪಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೆಂಕಟೇಶನಿಗೆ ಜಿಲ್ಲಾಧಿಕಾರಿ ಶರತ್​ ಬಿ. ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿದ್ದಾರೆ. ಮಹಿಳೆಯೊಬ್ಬರ ಮೃತದೇಹ ತೆಗೆದುಕೊಂಡು ಬಂದಿದ್ದ ಅಂಬ್ಯುಲೆನ್ಸ್​ ಹಿರೇರಾಯಕುಂಪಿ ಸೇತುವೆ ದಾಟಿ ಯಾದಗಿರಿ ಜಿಲ್ಲೆಯ ಮಾಚನೂರು ಗ್ರಾಮಕ್ಕೆ ಹೋಗಬೇಕಾಗಿತ್ತು. ಆದರೆ ಈ ವೇಳೆ ಸೇತುವೆ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಈ ವೇಳೆ ಬಾಲಕ ನೀರಿನಲ್ಲಿ ಇಳಿದು ಅಂಬ್ಯುಲೆನ್ಸ್​ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ.

ಬಾಲಕನಿಗೆ ಶೌರ್ಯ ಪ್ರಶಸ್ತಿ

ಮುಳುಗಡೆಯಾಗಿದ್ದ ಸೇತುವೆ ಮಾರ್ಗದ ಉದ್ದಕ್ಕೂ ನೀರಿನಲ್ಲಿ ನಡೆಯುತ್ತಾ ಹೋಗಿ, ಅಂಬ್ಯುಲೆನ್ಸ್​​ಗೆ ದಾರಿ ತೊರಿಸಿದ್ದ. ಇನ್ನು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಜತೆಗೆ ಬಾಲಕನ ಸಾಹಸಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ABOUT THE AUTHOR

...view details