ಕರ್ನಾಟಕ

karnataka

ETV Bharat / state

ರಾಯಚೂರು: 109 ಮಂದಿಗೆ ಸೋಂಕು ದೃಢ, ಸೋಂಕಿತರ ಸಂಖ್ಯೆ 2,381ಕ್ಕೆ ಏರಿಕೆ

ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಬಿಸಿಲೂರಿನ ಜನತೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಇಂದು 109 ಮಂದಿಯಲ್ಲಿ ಸೋಂಕು ದೃಢಪಡುವ ಮೂಲಕ ಸೋಂಕಿತರ ಸಂಖ್ಯೆ 2,381ಕ್ಕೆ ಏರಿಕೆಯಾಗಿದೆ.

Raichur corona case
Raichur corona case

By

Published : Aug 1, 2020, 8:10 PM IST

ರಾಯಚೂರು: ಜಿಲ್ಲೆಯಲ್ಲಿ ಇಂದು 109 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 2,381ಕ್ಕೆ ತಲುಪಿದೆ.

ರಾಯಚೂರು ತಾಲೂಕಿನಲ್ಲಿ 70, ಮಾನವಿ 7, ಲಿಂಗಸೂಗೂರು 27, ಸಿಂಧನೂರು ತಾಲೂಕಿನಲ್ಲಿ ಐವರು ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಗಳನ್ನು ಪತ್ತೆ ಹಚ್ಚಲಾಗುತ್ತಿದೆ.

ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 1,471 ಮಂದಿ ಸಂಪೂರ್ಣ ಗುಣಮುಖ ಹೊಂದಿದ್ದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯ 885 ಸಕ್ರಿಯ ಪ್ರಕರಣಗಳಿವೆ. 25 ಸೋಂಕಿತರು ವೈರಸ್‌ ಬಾಧೆಯಿಂದ ಬಲಿಯಾಗಿದ್ದಾರೆ.

ABOUT THE AUTHOR

...view details