ರಾಯಚೂರು:ಜಿಲ್ಲೆಯಲ್ಲಿ ದಿನ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 107 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 1502ಕ್ಕೆ ತಲುಪಿದೆ.
ರಾಯಚೂರು ಜಿಲ್ಲೆಯಲ್ಲಿಂದು 107 ಜನರಿಗೆ ಕೊರೊನಾ ಸೋಂಕು ದೃಢ - Raichur Corona case
ಜಿಲ್ಲೆಯಲ್ಲಿಂದು 107 ಕೊರೊನಾ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 1,502ಕ್ಕೆ ಏರಿದ್ದು, ಒಟ್ಟು 686 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.
ಇಂದು ಪತ್ತೆಯಾಗಿರುವ ಸೋಂಕಿತರಲ್ಲಿ ರಾಯಚೂರು ತಾಲೂಕಿನ 74, ಸಿಂಧನೂರು 4, ಮಾನವಿ 6, ದೇವದುರ್ಗ 10, ಲಿಂಗಸೂಗೂರು ತಾಲೂಕಿನ 13 ಮಂದಿ ಇದ್ದಾರೆ. ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 798 ಜನ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 686 ಪ್ರಕರಣಗಳು ಸಕ್ರಿಯವಾಗಿವೆ.
ಸೋಂಕಿನಿಂದ ಇಲ್ಲಿಯವರೆಗೆ 18 ಜನ ಮೃತಪಟ್ಟಿದ್ದರೆ, ಸಕ್ರಿಯ ಪ್ರಕರಣಗಳಿಗೆ ಸಂಬಂಧಿಸಿದಂತೆ 86 ಜನರನ್ನು ಜಿಲ್ಲೆಯ ಒಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನುಳಿದ 600 ಜನರಿಗೆ ಕ್ವಾರಂಟೈನ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.