ಕರ್ನಾಟಕ

karnataka

ETV Bharat / state

ರಾಯಚೂರು: ಹತ್ತಿ ಬೆಳೆಯ ಮಧ್ಯೆ ಮಾದಕ ಗಾಂಜಾ ಬೆಳೆದ ರೈತನ ಬಂಧನ - Raichur Murjuna news

ಲಿಂಗಸುಗೂರು ತಾಲೂಕಿನ ವ್ಯಕರನಾಳ ಬಳಿಯ ಹೆಗ್ಗಾಪುರ ಗ್ರಾಮದ ರೈತನೊಬ್ಬ ತನ್ನ ಜಮೀನಿನಲ್ಲಿ ಹತ್ತಿ ಬೆಳೆಗಳ ಮಧ್ಯೆ ಸುಮಾರು 1.20 ಲಕ್ಷ ರೂ. ಮೌಲ್ಯದ ಗಾಂಜಾ ಸಸಿ ಬೆಳೆದಿದ್ದನು.

Murjuna
ಗಾಂಜಾ ಗಿಡ ಜಪ್ತಿ

By

Published : Oct 9, 2020, 9:18 PM IST

ರಾಯಚೂರು:ಹತ್ತಿಬೆಳೆಗಳ ನಡುವೆ ಬೆಳೆದಿದ್ದ ಸುಮಾರು 1.20 ಲಕ್ಷ ರೂ. ಮೌಲ್ಯದ ಗಾಂಜಾ ಸಸಿಗಳನ್ನು ಮುದಗಲ್ಲ ಪೊಲೀಸರು ವಶಕ್ಕೆ ಪಡೆದು‌ಕೊಂಡಿದ್ದಾರೆ.

ಲಿಂಗಸುಗೂರು ತಾಲೂಕಿನ ವ್ಯಕರನಾಳ ಬಳಿಯ ಹೆಗ್ಗಾಪುರ ಸೀಮಾದ ಶರಣಪ್ಪ ಎಂಬುವವರು ತಮ್ಮ ಜಮೀನಿನಲ್ಲಿ ಹತ್ತಿ ಬೆಳೆಗಳ ಜೊತೆ ಗಾಂಜಾ ಸಸಿ ಬೆಳೆದಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು, 1.20 ಲಕ್ಷ ರೂ. ಮೌಲ್ಯದ ಗಾಂಜಾ ಸಸಿ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಗಾಂಜಾ ಗಿಡ ಜಪ್ತಿ

ಡಿವೈಎಸ್​ಪಿ ಎಸ್.ಎಸ್ ಹುಲ್ಲೂರು ನೇತೃತ್ವದಲ್ಲಿ ಸಿಪಿಐ ದೀಪಕ ಭೂಸರೆಡ್ಡಿ, ಪಿಎಸ್ಐ ಡಾಕೇಶ ಸಹಯೋಗದ ಪೊಲೀಸ್ ತಂಡ ದಾಳಿ ನಡೆಸಿತ್ತು.

ABOUT THE AUTHOR

...view details