ರಾಯಚೂರು: ನಾರಾಯಣಪುರ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 1.77 ಲಕ್ಷ ಕ್ಯೂಸೆಕ್ ನೀರನ್ನ ಹರಿ ಬಿಡಲಾಗುತ್ತಿದೆ. ಇದರಿಂದ ಜಿಲ್ಲೆಗೆ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದ್ದು, ಲಿಂಗಸುಗೂರು ತಾಲೂಕಿನ ನಡುಗಡ್ಡೆಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.
ಜಲಾಶಯಕ್ಕೆ 1.4 ಲಕ್ಷ ಕ್ಯೂಸೆಕ್ ಒಳಹರಿವಿನ ಪ್ರಮಾಣವಿದ್ದು, ಹಿಗಾಗಿ ಜಲಾಶಯದಿಂದ 1.77 ಲಕ್ಷ ಕ್ಯೂಸೆಕ್ ನೀರನ್ನ ಕೃಷ್ಣಾ ನದಿಗೆ ಹರಿ ಬೀಡಲಾಗುತ್ತಿದೆ. ಶೀಲಹಳ್ಳಿ ಬ್ರಿಡ್ಜ್ ಜಲಾವೃತ್ತಗೊಂಡಿದ್ದು, ಸೇತುವೆ ಮೇಲೆ ಸಂಚಾರವನ್ನ ಸ್ಥಗೀತಗೊಳಿಸಲಾಗಿದೆ.