ಮೈಸೂರು: ಭೂ ಮಾಫಿಯಾ ವಿರುದ್ಧ ನನ್ನ ತಂದೆ(ಎಚ್.ವಿಶ್ವನಾಥ್) ಧ್ವನಿ ಎತ್ತಿದ್ದಾರೆ. ಅದನ್ನ ಅಡಗಿಸಲು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್ ಪುತ್ರ, ಜಿಪಂ ಸದಸ್ಯ ಅಮಿತ್ ದೇವರಹಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಯಾವುದೇ ಭೂ ಒತ್ತುವರಿ, ಭೂ ಅಕ್ರಮ ಮಾಡಿಲ್ಲ. ಹಿನಕಲ್ ನಿವೇಶನ ವಿವಾದ ಕೋರ್ಟ್‌ನಲ್ಲಿದೆ. ನಮ್ಮ ತಂದೆಯ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ನಮ್ಮ ತಂದೆ ಮೈಸೂರು ಭೂ ಮಾಫಿಯಾ ಬಗ್ಗೆ ಧ್ವನಿ ಎತ್ತಿದ್ದಾರೆ. ಆ ಧ್ವನಿ ಅಡಗಿಸಲು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನಾನು 2017ರಲ್ಲಿ ಹಿನಕಲ್ ಬಳಿ ನಿಯಮಾನುಸಾರ ಜಮೀನು ಖರೀದಿಸಿದ್ದೇನೆ. ಪೊಲೀಸರ ಸಮ್ಮುಖದಲ್ಲಿ ಜಮೀನಿನ ಸುತ್ತ ಕಾಂಪೌಂಡ್ ಹಾಕಿಕೊಂಡಿದ್ದೇನೆ. ಆ ಜಮೀನನ್ನು ಖಾತೆ ಮಾಡಿಸಿಕೊಂಡಿರುವುದಾಗಿ ಯೋಗೇಶ್ ಎಂಬುವರು ಹೇಳಿಕೊಂಡಿದ್ದಾರೆ. ಈ ನಿವೇಶನ ವಿಚಾರ ನ್ಯಾಯಾಲಯದ ಸುಪರ್ದಿಯಲ್ಲಿದೆ. ಹಾಗಾಗಿ ಇಷ್ಟು ದಿನಗಳ ಕಾಲ ಈ ಬಗ್ಗೆ ಮಾತನಾಡಿರಲಿಲ್ಲ ಎಂದರು.
ಮೈಸೂರಿನಲ್ಲಿ ಜಿ.ಪಂ ಸದಸ್ಯ ಅಮಿತ್ ದೇವರಹಟ್ಟಿ ಸುದ್ದಿಗೋಷ್ಠಿ ಆದರೀಗ ನನ್ನ ವಿರುದ್ಧ ಆರೋಪ ಮಾಡಿರುವುದರಿಂದ ಸ್ಪಷ್ಟನೆ ನೀಡಲು ಬಂದಿದ್ದೇನೆ. ಅದಕ್ಕೆ ಸೂಕ್ತ ದಾಖಲೆಗಳಿವೆ ಎಂದು ಕೆಲ ಕಾಗದ ಪತ್ರಗಳನ್ನು ಪ್ರದರ್ಶಿಸಿ ಹೇಳಿದರು. ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತಾದರೆ ಜಮೀನನ್ನು ಹಿಂತಿರುಗಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು. ಮುಡಾ ಸದಸ್ಯ ನವೀನ್ ಕುಮಾರ್ ಮಾತನಾಡಿ, ರೋಹಿಣಿ ಸಿಂಧೂರಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಸನ್ಮಾನ ಮಾಡಲಾಯಿತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.