ಮೈಸೂರು:ಸುಮಾರು ಹತ್ತು ದಿನಗಳಿಂದ ಯುವ ಮನಸ್ಸುಗಳನ್ನು ಹುಚ್ಚೆದ್ದು ಕುಣಿಸಿದ್ದ, ಪ್ರೇಕ್ಷರನ್ನು ಸಂಭ್ರಮದಲ್ಲಿ ತೇಲಿಸಿದ್ದ ದಸರಾ ಯುವ ಸಂಭ್ರಮ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆ ಬಿದ್ದಿದೆ.
ದಸರಾ ಯುವ ಸಂಭ್ರಮಕ್ಕೆ ಅದ್ಧೂರಿ ತೆರೆ
ನಗರದಲ್ಲಿ ಮೈಸೂರು ದಸರಾ ಮಹೋತ್ಸವದ ಸಂಭ್ರಮ ಗರಿಗೆದರಿದ್ದು, ಎಲ್ಲಡೆ ಸಂತಸ, ಸಡಗರ ಮನೆ ಮಾಡಿದೆ. ಇರದ ಅಂಗವಾಗಿ ನಗರದಲ್ಲಿರುವ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಸುಮಾರು ಹತ್ತು ದಿನಗಳಿಂದ ನಡೆದ ಯುವ ಸಂಭ್ರಮ ಕಾರ್ಯಕ್ರಮಕ್ಕೆ ನಿನ್ನೆ ಅದ್ಧೂರಿ ತೆರೆ ಬಿದ್ದಿದೆ.
ನಗರದಲ್ಲಿರುವ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಟ ಗೋಲ್ಡನ್ ಸ್ಟಾರ್ ಗಣೇಶ್, ಸೆ. 17ರಂದು ದಸರಾ ಯುವ ಸಂಭ್ರಮೋತ್ಸವಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ದರು. ಅಂದಿನಿಂದ ಪ್ರಾರಂಭವಾಗಿದ್ದ ದಸರಾ ಯುವ ಸಂಭ್ರಮ ಕಾರ್ಯಕ್ರಮಕ್ಕೆ ನಿನ್ನೆ ತೆರೆ ಬಿದ್ದಿದೆ.
ಈ ಕಾರ್ಯಕ್ರಮದಲ್ಲಿ ಸುಮಾರು 278 ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳ ತಂಡಗಳು ಹತ್ತು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸಂಭ್ರಮ- ಸಡಗರದಿಂದ ಭಾಗವಹಿಸಿ ಜನರಿಗೆ ಮನರಂಜನೆ ನೀಡಿದವು. ಯುವ ಸಂಭ್ರಮದಲ್ಲಿ ಪರಿಸರ, ದೇಶಪ್ರೇಮ, ಪ್ಲಾಸ್ಟಿಕ್ ಮುಕ್ತ ರಾಜ್ಯ, ಯೋಧರ ಕಿಚ್ಚು, ನಾಡಿನ ಐತಿಹಾಸಿಕ ಪರಂಪರೆ ಸಾರುವ ಹಾಡುಗಳಿಗೆ ಮಾಡಿದ ನೃತ್ಯ ಎಲ್ಲರ ಮನಸೂರೆಗೊಂಡವು. ನೃತ್ಯದ ಮೋಡಿಗೆ ಯುವ ಸಮೂಹ ಕುಣಿದು ಕುಪ್ಪಳಿಸಿತು.