ಮೈಸೂರು: ತಲೆ ಕೂದಲಿನ ಸಮಸ್ಯೆಯಿಂದ ಬೇಸರಗೊಂಡ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ರಾಘವೇಂದ್ರ ಬಡಾವಣೆಯಲ್ಲಿ ನಡೆದಿದೆ. ಬಡಾವಣೆಯ ಕಾವ್ಯಶ್ರೀ (21) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಗುರುತಿಸಲಾಗಿದೆ.
ಮೈಸೂರು: ತಲೆ ಕೂದಲು ಸಮಸ್ಯೆಯಿಂದ ಬೇಸತ್ತು ನೇಣಿಗೆ ಶರಣಾದ ಯುವತಿ! - ಮೈಸೂರಿನಲ್ಲಿ ಯುವತಿ ಆತ್ಮಹತ್ಯೆಗೆ ಶರಣು
ತಲೆ ಕೂದಲು ಸಮಸ್ಯೆಯಿಂದಾಗಿ ಯುವತಿಯೊಬ್ಬಳು ತನ್ನ ಪ್ರಾಣವನ್ನೇ ತ್ಯಾಗ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರಿನಲ್ಲಿ ತಲೆ ಕೂದಲು ಸಮಸ್ಯೆ ಬೇಸತ್ತು ನೇಣಿಗೆ ಶರಣಾದ ಯುವತಿ
ಓದಿ:ICUನಲ್ಲಿ ಚಿಕಿತ್ಸೆ ಪಡೀತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆ ಕಣ್ಣಿನ ರೆಪ್ಪೆ ಕಚ್ಚಿ, ಕೂದಲು ತಿಂದ ಮೂಷಿಕ!
ಇವರಿಗೆ ತಲೆಕೂದಲು ಉದುರುತ್ತಿತ್ತು. ಸಾಕಷ್ಟು ಬಾರಿ ಚಿಕಿತ್ಸೆ ಪಡೆದಿದ್ದರೂ ಸಹ ಗುಣಮುಖ ಆಗಿರಲಿಲ್ಲ. ಜೊತೆಗೆ ತಲೆ ಕೂದಲು ಸಂಪೂರ್ಣವಾಗಿ ಉದುರಿ ಹೋಗಿದ್ದರಿಂದ ತೀವ್ರ ಬೇಸರಗೊಂಡಿದ್ದರು ಎನ್ನಲಾಗ್ತಿದೆ. ಇದರಿಂದ ನೊಂದ ಕಾರಣ ಕಾವ್ಯಶ್ರೀ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕುರಿತು ನಜರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.