ಕರ್ನಾಟಕ

karnataka

ETV Bharat / state

ಪ್ರೀತಿಸಿ ಮದುವೆಯಾದ ಜೋಡಿಹಕ್ಕಿ... ತಿಂಗಳಲ್ಲೇ ನಡೀತು ಘೋರ ದುರಂತ! - undefined

ಇತ್ತೀಚೆಗಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಪೋಷಕರು ಕರೆದೊಯ್ದಿದ್ದರಿಂದ ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ಯುವಕ ಆತ್ಮಹತ್ಯೆ

By

Published : Jun 27, 2019, 1:15 PM IST

ಮೈಸೂರು:ಪ್ರೀತಿಸಿ ಮದುವೆಯಾಗಿದ್ದ ಯುವತಿಯನ್ನು ಆಕೆಯ ಪೋಷಕರು ಮನೆಗೆ ಕರೆದೊಯ್ದಾಗ ದುರಂತವೊಂದು ಸಂಭವಿಸಿದೆ. ಪತ್ನಿಯನ್ನು ಕರೆದೊಯ್ದಿದ್ದಕ್ಕೆ ಬೇಸರಗೊಂಡ‌ ಪ್ರಿಯತಮ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ದೇವನೂರು ಗ್ರಾಮದ ವಿಜ್ಞೇಶ್ (22) ಆತ್ಮಹತ್ಯೆ ಮಾಡಿಕೊಂಡಿರುವ ನವ ವಿವಾಹಿತ. ತಿಂಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಇದರಿಂದ ಆಗಾಗ ಯುವತಿ ಹಾಗೂ ಯುವಕನ ಮನೆಯವರಿಗೆ ಗಲಾಟೆ ನಡೆದಿತ್ತು ಎನ್ನಲಾಗ್ತಿದೆ.

ನಿನ್ನೆ ಯುವತಿಯನ್ನು ಆಕೆಯ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದರು. ಇದರಿಂದ ಮಾನಸಿಕವಾಗಿ ತುಂಬ ನೊಂದಿದ್ದ ವಿಜ್ಞೇಶ್ ಇಂದು ಜಮೀನಿನ ಹೊರವಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details