ಮೈಸೂರು :ದುಷ್ಕರ್ಮಿಗಳ ತಂಡ ಯುವಕನೋರ್ವನನ್ನು ಕೊಚ್ಚಿ ಕೊಲೆಗೈದಿರುವ ಘಟನೆ ತಿ.ನರಸೀಪುರ ತಾಲೂಕಿನ ಬನ್ನೂರು ಹೋಬಳಿಯಲ್ಲಿ ನಡೆದಿದೆ.
ಬನ್ನೂರಿನ ಸೇನಾಪತಿಹಳ್ಳಿಯ ಸಿದ್ದೇಗೌಡರ ಪುತ್ರ ರಘು (26) ಕೊಲೆಯಾದ ದುರ್ದೈವಿ. ಕೊಲೆಗೈದ ಬಳಿಕ ಯುವಕನ ಶವವನ್ನು ಜಮೀನಿನ ಬಳಿ ಬಿಸಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಜಮೀನಲ್ಲಿ ಪತ್ತೆಯಾದ ಯುವಕ ಮೃತದೇಹ ಓದಿ : ಕೌಟುಂಬಿಕ ಕಲಹ ಹಿನ್ನೆಲೆ: ಹೆತ್ತ ತಂದೆ - ತಾಯಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್ಟೇಬಲ್
ಸ್ಥಳಕ್ಕೆ ಶ್ವಾನ ದಳದೊಂದಿಗೆ ನಂಜನಗೂಡು ಡಿವೈಎಸ್ಪಿ ಗೋವಿಂದರಾಜ್, ಸಿಪಿಐ ಕೃಷ್ಣಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬನ್ನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.