ಕರ್ನಾಟಕ

karnataka

ETV Bharat / state

ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಕೊಲೆ: ಡಿಸಿಪಿ ಹೇಳಿದ್ದೇನು ? - ಕೊಲೆ

ನಗರದ ಮಹದೇವಪುರ ರಸ್ತೆಯಲ್ಲಿ ಕುಡಿದು ಮಲಗಿದ್ದ ವ್ಯಕ್ತಿಯ ತಲೆ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ.

murder
ಯುವಕನ ಕೊಲೆ

By

Published : May 13, 2020, 5:57 PM IST

Updated : May 14, 2020, 12:01 PM IST

ಮೈಸೂರು: ಕುಡಿದು ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಗರದ ಮಹದೇವಪುರ ರಸ್ತೆಯಲ್ಲಿ ನಡೆದಿದೆ.

ಹೀಗೆ ಕೊಲೆಯಾದ ವ್ಯಕ್ತಿ ಸುರೇಶ್ (35) ಈತ ಗಾಂಧಿನಗರದ ನಿವಾಸಿಯಾಗಿದ್ದು, ಕುಡಿದು ಸಿಕ್ಕ ಸಿಕ್ಕ ರಸ್ತೆಗಳಲ್ಲಿ ಮಲಗುತ್ತಿದ್ದನು. ಅದರಂತೆ ಕುಡಿದು ಮಹದೇವಪುರ ರಸ್ತೆಯಲ್ಲಿ ಮಲಗಿದ್ದಾಗ ಯಾರೋ ದುಷ್ಕರ್ಮಿಗಳು ಈತನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದು, ಕಿವಿ ಮತ್ತು ತಲೆ ಭಾಗ ಜಜ್ಜಿ ಹೋಗಿದೆ. ಇನ್ನು ಈ ಸಂಬಂಧ ಎನ್.ಆರ್.ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಲೆ ಬಗ್ಗೆ ಡಿಸಿಪಿ ಹೇಳಿದ್ದೇನು ?

ಡಿಸಿಪಿ ಪ್ರಕಾಶ್ ಗೌಡ

ರಾತ್ರಿ ಸಮಯದಲ್ಲಿ ಸುರೇಶ್ ಎಂಬ ವ್ಯಕ್ತಿಯು ಕುಡಿದು ರಸ್ತೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದು, ಪೊಲೀಸ್​ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಯಾವ ಉದ್ದೇಶಕ್ಕಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿಲ್ಲ. ಸಾಕ್ಷಿ ಆಧಾರಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಅಲ್ಲದೇ ಇತ್ತೀಚೆಗೆ ನಗರದಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ಎರಡೂ ತಿಂಗಳಿನಿಂದಲೂ ಯಾವುದೇ ಅಪರಾಧ ಪ್ರಕರಣಗಳು ಇರಲಿಲ್ಲ ಇತ್ತೀಚೆಗೆ ಜಾಸ್ತಿಯಾಗಿದೆ ಎಂದು ಇದೇ ಸಂದರ್ಭದಲ್ಲಿ ಡಿಸಿಪಿ ಪ್ರಕಾಶ್ ಗೌಡ ತಿಳಿಸಿದರು.

Last Updated : May 14, 2020, 12:01 PM IST

ABOUT THE AUTHOR

...view details