ಕರ್ನಾಟಕ

karnataka

ETV Bharat / state

ಪ್ರೀತ್ಸೆ ಪ್ರೀತ್ಸೆ ಅಂತಾ ಅಪ್ರಾಪ್ತೆ ಹಿಂದೆ ಬಿದ್ದ ಯುವಕ: ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಎಸ್ಕೇಪ್!​ - young man who fell behind the girl in mysore

ಮೈಸೂರು ಜಿಲ್ಲೆಯಲ್ಲಿ ಬಾಲಕಿ ಹಿಂದೆ ಬಿದ್ದ ಯುವಕನೋರ್ವ, ಆಕೆಯನ್ನು ಗರ್ಭಿಣಿ ಮಾಡಿ ಬಳಿಕ ಪರಾರಿಯಾಗಿದ್ದಾನೆ.

young man fleeing after her girl friend pregnant
ಗರ್ಭಿಣಿಯಾಗುತ್ತಿದ್ದಂತೆ ಪರಾರಿಯಾದ ಯುವಕ

By

Published : Jul 27, 2021, 6:38 PM IST

ಮೈಸೂರು: ಜಿಲ್ಲೆಯಲ್ಲಿ ಯುವಕನೋರ್ವ ಬಾಲಕಿಯನ್ನು ಗರ್ಭಿಣಿ ಮಾಡಿ ಬಳಿಕ ಆಕೆಗೆ ಕೈಕೊಟ್ಟು ಪರಾರಿಯಾಗಿದ್ದಾನೆ. ಪ್ರೀತ್ಸೆ ಪ್ರೀತ್ಸೆ ಅಂತಾ ಅಪ್ರಾಪ್ತೆ ಹಿಂದೆ ಬಿದ್ದ ಯುವಕ ಆಕೆ ಗರ್ಭಿಣಿಯಾಗುತ್ತಿದ್ದಂತೆ ನಾಪತ್ತೆಯಾಗಿರುವ ಘಟನೆ ಹುಣಸೂರು ತಾಲೂಕಿನಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಅಯ್ಯನಕೆರೆ ಹಾಡಿ ನಿವಾಸಿ ಸುರೇಶ್ ಎಂಬಾತ ಅಪ್ರಾಪ್ತೆಯೊಂದಿಗೆ ಪ್ರೀತಿಯ ನಾಟಕವಾಡಿ ಕೈಕೊಟ್ಟಿರುವ ಆರೋಪಿ. ಪ್ರೀತಿಸುವಂತೆ ಅಪ್ರಾಪ್ತೆ ಹಿಂದೆ ಬಿದ್ದ ಈತ ಆಕೆಯನ್ನು ಗರ್ಭಿಣಿ ಮಾಡಿದ್ದಾನೆ. ಈ ವಿಚಾರ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ‌ ಎನ್ನಲಾಗ್ತಿದೆ.

ಬಾಲಕಿಯು ನಡೆದ ಘಟನೆಯನ್ನು ತನ್ನ ತಾಯಿಯೊಂದಿಗೆ ಹೇಳಿಕೊಂಡಿದ್ದಾಳೆ. ನಂತರ ಹುಣಸೂರು ಗ್ರಾಮಾಂತರ ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸುತ್ತಿದ್ದಂತೆ, ಯುವಕ ಸುರೇಶ್​ ನಾಪತ್ತೆ ಆಗಿದ್ದಾನೆ.

ಓದಿ:ಜೈ ವೀರಭದ್ರ ಎದ್ದೇಳು, ರುದ್ರಾ ರೆಡಿಯಾಗಿ.. ಯಡಿಯೂರಪ್ಪನವರಿಗೆ ಮದುವೆ ಮಾಡಿದರೆ 2 ಮಕ್ಕಳು ಮಾಡ್ತಾರೆ : ಸಿಎಂ ಇಬ್ರಾಹಿಂ

ABOUT THE AUTHOR

...view details