ಕರ್ನಾಟಕ

karnataka

ETV Bharat / state

ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಯುವಕ ಸಾವು - mysore crime news

ಮೈಸೂರಿನಿಂದ ಗುಂಡ್ಲುಪೇಟೆಗೆ ಹೂವನ್ನು ಲೋಡ್ ಮಾಡಿಕೊಂಡು ಬರಲು ಕ್ರೇಟ್​ಗಳ ಸಮೇತ ಲಾರಿಯಲ್ಲಿ ಹೋಗುತ್ತಿದ್ದಾಗ, ಲಾರಿಯ ವೇಗಕ್ಕೆ ಉರುಳುತ್ತಿದ್ದ ಕ್ರೇಟ್​ಗಳನ್ನ ಹಿಡಿಯಲು ಹೋದ ಫಾಸಿಲ್,ಆಯತಪ್ಪಿ ಕ್ರೇಟ್​ಗಳ ಸಮೇತ ರಸ್ತೆಗೆ ಉರುಳಿಬಿದ್ದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಸಾವಿಗೀಡಾಗಿದ್ದಾನೆ.

Young man Dies  in mysore
ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಯುವಕ ಸಾವು

By

Published : Jul 30, 2020, 6:11 AM IST

ಮೈಸೂರು: ವೇಗವಾಗಿ ಚಲಿಸುತ್ತಿದ್ದ ಲಾರಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡ ಕೂಲಿ ಕಾರ್ಮಿಕನೊಬ್ಬ ಸಾವಿಗೀಡಾಗಿದ್ದಾನೆ .

ಗೌಸಿಯಾನಗರದ ನಿವಾಸಿ ಫಾಸಿಲ್(20 ) ಮೃತ ಯುವಕ. ಮೈಸೂರು - ನಂಜನಗೂಡು ರಸ್ತೆಯ ಟೋಲ್​ಗೇಟ್ ಬಳಿ ಘಟನೆ ನಡೆದಿದ್ದು, ಮೈಸೂರಿನಿಂದ ಗುಂಡ್ಲುಪೇಟೆಗೆ ಹೂವನ್ನು ಲೋಡ್ ಮಾಡಿಕೊಂಡು ಬರಲು ಕ್ರೇಟ್​ಗಳ ಸಮೇತ ಲಾರಿಯಲ್ಲಿ ಹೋಗುತ್ತಿದ್ದಾಗ, ಲಾರಿಯ ವೇಗಕ್ಕೆ ಉರುಳುತ್ತಿದ್ದ ಕ್ರೇಟ್​ಗಳನ್ನ ಹಿಡಿಯಲು ಹೋದ ಫಾಸಿಲ್,ಆಯತಪ್ಪಿ ಕ್ರೇಟ್​ಗಳ ಸಮೇತ ರಸ್ತೆಗೆ ಉರುಳಿ ಬಿದ್ದಿದ್ದಾನೆ.

ತೀವ್ರವಾಗಿ ಗಾಯಗೊಂಡ ಫಾಸಿಲ್​ನನ್ನು ಆಸ್ಪತ್ರೆಗೆ ರವಾನೆ ಮಾಡುತ್ತಿದ್ದಾಗ, ಮಾರ್ಗಮಧ್ಯೆ ಸಾವಿಗೀಡಾಗಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details