ಮೈಸೂರು : ಹುಟ್ಟುಹಬ್ಬದ ದಿನದಿಂದೇ ಮರದ ಕೊಂಬೆ ಬಿದ್ದು ಯುವಕ ಮೃತಪಟ್ಟಿರುವ ಘಟನೆ ತಿ.ನರಸೀಪುರ ರಸ್ತೆಯಲ್ಲಿ ನಡೆದಿದೆ. ಮೂಗೂರು ಗ್ರಾಮದ ಮನು(28) ಮೃತ ಯುವಕ. ಮನುಗೆ ಇಂದು ಹುಟ್ಟುಹಬ್ಬ ಇದ್ದ ಹಿನ್ನೆಲೆಯಲ್ಲಿ, ಮೈಸೂರಿನಲ್ಲಿರುವ ತನ್ನ ತಮ್ಮನಿಗೆ ಸಿಹಿ ತಿನಿಸಲು ನೀಡಲು ಹೋಗಿದ್ದ.
ಮೈಸೂರು: ಹುಟ್ಟುಹಬ್ಬದ ದಿನದಂದೇ ತಲೆ ಮೇಲೆ ಮರದ ಕೊಂಬೆ ಬಿದ್ದು ಯುವಕ ಸಾವು - ಮೈಸೂರಿನಲ್ಲಿ ಹುಟ್ಟುಹಬ್ಬದ ದಿನದಿಂದೇ ತಲೆ ಮೇಲೆ ಮರದ ಕೊಂಬೆ ಬಿದ್ದು ಯುವಕ ಸಾವು
ಹಳೇ ಕೆಂಪಯ್ಯನಹುಂಡಿ ಗ್ರಾಮದ ರಸ್ತೆಯಲ್ಲಿ ಆಕಸ್ಮಿಕವಾಗಿ ತಲೆಯ ಮೇಲೆ ಮರ ಬಿದ್ದ ಪರಿಣಾಮ ಯುವಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಮರದ ಕೊಂಬೆ ಬಿದ್ದು ಯುವಕ ಸಾವು
ಅಲ್ಲಿಂದ ವಾಪಸ್ ಗ್ರಾಮಕ್ಕೆ ಬೈಕ್‌ನಲ್ಲಿ ಹೋಗುತ್ತಿರುವಾಗ ಹಳೇ ಕೆಂಪಯ್ಯನಹುಂಡಿ ಗ್ರಾಮದ ರಸ್ತೆಯಲ್ಲಿ ಆಕಸ್ಮಿಕವಾಗಿ ತಲೆಯ ಮೇಲೆ ಮರ ಬಿದ್ದ ಪರಿಣಾಮ, ಮನು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ತಿ. ನರಸೀಪುರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೃಷ್ಣಪ್ಪ ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿನೆ ನಡೆಸಿದ್ದಾರೆ.
Last Updated : Mar 28, 2022, 9:02 PM IST