ಮೈಸೂರು:ಹಾವನ್ನು ಹಿಡಿಯಲು ಹೋದಾಗ ಅದು ಕೈಗೆ ಕಚ್ಚಿದ ಪರಿಣಾಮ ಯುವಕನ ಪ್ರಾಣ ಪಕ್ಷಿಯೇ ಹಾರಿಹೋಗಿರುವ ಘಟನೆ ಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
LIVE VIDEO: ಹೆಬ್ಬಾವು ಅಂತ ಹಿಡಿಯಲು ಹೋಗಿ ವಿಷ ಸರ್ಪದಿಂದ ಕಚ್ಚಿಸಿಕೊಂಡ ಯುವಕ ಸಾವು! - snake bites man
ಮೈಸೂರಿನ ಮಹದೇಶ್ವರ ಬೆಟ್ಟದಲ್ಲಿ ಹೆಬ್ಬಾವು ಅಂತ ಅಂತ ಹಿಡಿಯಲು ಹೋದ ಯುವಕನೊಬ್ಬ ವಿಷಪೂರಿತ ಹಾವಿನಿಂದ ಕಚ್ಚಿಸಿಕೊಂಡು ಪ್ರಾಣ ಕಳೆದುಕೊಂಡಿದ್ದಾನೆ.
ಹಾವು ಕಚ್ಚಿ ಯುವಕ ಸಾವು
ಮೈಸೂರಿನ ವಿದ್ಯಾರಣ್ಯಪುರಂ ನಿವಾಸಿ ಮಧು( 24) ಮೃತ ಯುವಕ. ಈತ ಎಲೆಕ್ಟ್ರಿಕ್ ಕೆಲಸಕ್ಕೆಂದು ಮಹದೇಶ್ವರ ಬೆಟ್ಟಕ್ಕೆ ಸ್ನೇಹಿತರ ಜೊತೆ ತೆರಳಿದ್ದು, ಅಲ್ಲಿ ಹೆಬ್ಬಾವು ಎಂದು ತಪ್ಪು ತಿಳಿದು ಮೆಟ್ಟಲಿನ ಮೇಲಿದ್ದ ವಿಷಪೂರಿತ ಹಾವನ್ನು ಹಿಡಿಯಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಹಾವು ಅವನ ಬಲ ಕೈಗೆ ಕಚ್ಚಿದೆ. ಬಳಿಕ ಯುವಕ ಅಸ್ವಸ್ಥಗೊಂಡಾಗ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಮಧು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
Last Updated : Apr 12, 2021, 10:40 PM IST