ಕರ್ನಾಟಕ

karnataka

ETV Bharat / state

ಮಹಿಳೆಗೆ ಲೈಂಗಿಕ ಕಿರುಕುಳ.. ಗಂಡನ ಆವಾಜ್‌ಗೆ ಹೆದರಿ ಯುವಕ ಆತ್ಮಹತ್ಯೆ! - ಲೈಂಗಿಕ ಕಿರುಕುಳ ವಿವಾದ

ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನಿಗೆ ಆಕೆ ಗಂಡ ಆವಾಜ್‌ ಹಾಕಿದ್ದಾನೆ. ಇದರಿಂದ ಹೆದರಿದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

Young man committed suicide in Mysore, sexual harassment issue,  Mysore crime news, ಮೈಸೂರಿನಲ್ಲಿ ಯುವಕ ಆತ್ಮಹತ್ಯೆಗೆ ಶರಣು, ಲೈಂಗಿಕ ಕಿರುಕುಳ ವಿವಾದ, ಮೈಸೂರು ಅಪರಾಧ ಸುದ್ದಿ,
ಗಂಡನ ಆವಾಜ್‌ಗೆ ಹೆದರಿ ಯುವಕ ಆತ್ಮಹತ್ಯೆ

By

Published : Jan 15, 2022, 8:06 AM IST

ಮೈಸೂರು:ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನಿಗೆ ಮಹಿಳೆಯ ಪತಿ ಅವಾಜ್ ಹಾಕಿದ್ದಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಯರಗನಹಳ್ಳಿ ನಿವಾಸಿ ಪ್ರಜ್ವಲ್ (19) ಮೃತ ಯುವಕ ಎಂದು ಗುರತಿಸಲಾಗಿದೆ. ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಜ್ವಲ್, ಅಪರಿಚಿತ ಮಹಿಳೆಗೆ ಫೋನ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಲೈಗಿಂಕ ಕಿರುಕುಳಕ್ಕೆ ಬೇಸತ್ತ ಮಹಿಳೆ ತನ್ನ ಪತಿಗೆ ಹೇಳಿದ್ದಾರೆ.

ಓದಿ:ಪ್ರೀತಿ ಜಿಂಟಾಗೆ 'ಮಮ್ಮಿ ವೈಬ್ಸ್' ಫೋಟೋಗಳು ಸಖತ್​ ವೈರಲ್​.. ತನ್ನ ಮಕ್ಕಳ ಬಗ್ಗೆ ಹೇಳಿದ್ದು ಹೀಗೆ!

ಮಹಿಳೆಯ ಪತಿ ಸೇರಿದಂತೆ 5 ಮಂದಿ ಯರಗನಹಳ್ಳಿಯಲ್ಲಿರುವ ಯುವಕನ ಮನೆಗೆ ತೆರಳಿ ಗುರುವಾರ ಗಲಾಟೆ ಮಾಡಿದ್ದಾರೆ. ನಂತರ ಶುಕ್ರವಾರ ಹೋಟೆಲ್​ನಿಂದ ಪ್ರಜ್ವಲ್​ನನ್ನ ಕರೆದೊಯ್ಯುವ ಪ್ರಯತ್ನ ಮಾಡಲಾಗಿದೆ. ಹೋಟೆಲ್ ಯೂನಿಫಾರಮ್​ನಲ್ಲಿದ್ದ ಕಾರಣ ಬಟ್ಟೆ ಬದಲಿಸಿ ಬರುವುದಾಗಿ ಪ್ರಜ್ವಲ್ ತಿಳಿಸಿ, ಹೋಟೆಲ್ ಕಟ್ಟಡದ ತಾರಸಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಪತಿ ಸೇರಿದಂತೆ 5 ಮಂದಿ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details