ಮೈಸೂರು: ನ್ಯಾಯ ಸಿಗಲಿಲ್ಲ ಎಂದು ಮನನೊಂದ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ, ದೇವಸ್ಥಾನದ ಬಳಿಯೇ ನೇಣಿಗೆ ಶರಣಾಗಿರುವ ಘಟನೆ ಕೆ.ಆರ್ ನಗರ ತಾಲೂಕಿನ ಮೂಲೆಪೆಟ್ಟು ಗ್ರಾಮದಲ್ಲಿ ನಡೆದಿದೆ.
ಬಾಲ್ರಾಜ್ (23) ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಮೂಲೆಪೆಟ್ಟು ಗ್ರಾಮದಲ್ಲಿ ತನ್ನ ತಾಯಿಯೊಂದಿಗೆ ವಾಸವಾಗಿದ್ದ. ಅದೇ ಗ್ರಾಮದ 4 ಜನ ಯುವಕರು ಕ್ಷುಲ್ಲಕ ಕಾರಣಕ್ಕಾಗಿ ಮನೆಗೆ ನುಗ್ಗಿ ಬಾಲ್ರಾಜ್ ಹಾಗೂ ಆತನ ತಾಯಿಯ ಮೇಲೆ ಹಲ್ಲೆ ಮಾಡಿ, ತಾಯಿಯ ತಾಳಿಯನ್ನು ಸಹ ಕಿತ್ತು ಹಾಕಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬಾಲ್ರಾಜ್ ದೂರು ನೀಡಿದ್ದ.