ಮೈಸೂರು: ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ನಗರದ ಕಲ್ಯಾಣಿಗಿರಿಯಲ್ಲಿ ನಡೆದಿದೆ.
'ನಾನು ಒಳ್ಳೆಯ ಮಗಳಲ್ಲ, ಒಳ್ಳೆ ಹೆಂಡತಿಯಾಗಲೂ ಅರ್ಹಳಲ್ಲ': ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ - Mysure crime news
ಮೈಸೂರಿನ ಕಲ್ಯಾಣಿಗಿರಿ ನಗರದ ಯುವತಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕೀರ್ತನಿ (23) ನೇಣಿಗೆ ಶರಣಾದ ಯುವತಿ. ಈಕೆ ಕಲ್ಯಾಣಿಗಿರಿ ನಗರದ ನಿವಾಸಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇವಳ ಇಷ್ಟದಂತೆ ನವೆಂಬರ್ ತಿಂಗಳಿನಲ್ಲಿ ಮದುವೆ ನಿಗದಿಯಾಗಿತ್ತು. ಮನೆಯವರು ಮದುವೆಗೆ ಎಂದು ಕಲ್ಯಾಣ ಮಂಟಪ ಬುಕ್ ಮಾಡಲು ಹೋಗಿದ್ದಾಗ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.
ಡೆತ್ ನೋಟ್ನಲ್ಲಿ 'ನಾನು ಒಳ್ಳೆಯ ಮಗಳಲ್ಲ, ಒಳ್ಳೆಯ ಹೆಂಡತಿಯಾಗಲೂ ಅರ್ಹಳಲ್ಲ' ಎಂದು ಬರೆದಿದ್ದಾರೆ. ಇನ್ನು ಈಕೆ ತನ್ನ ಮೊಬೈಲ್ ನಲ್ಲಿರುವ ಸಂದೇಶ, ಕರೆಗಳ ಡಿಟೇಲ್ಸ್ ಅನ್ನು ಡಿಲೀಟ್ ಮಾಡಿದ್ದು, ಮೊಬೈಲ್ ಪಾಸ್ ವರ್ಡ್ ಸಹ ಬದಲಾಯಿಸಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
Mysure crime news