ಮೈಸೂರು:ಶ್ವಾನಗಳ ದಾಳಿಯಿಂದ ಗಾಯಗೊಂಡಿದ್ದ ಚಿರತೆ ಮರಿಯನ್ನು ಹುಣಸೂರು ತಾಲೂಕಿನ ಮೈಲಾಂಬುರು ಗ್ರಾಮದ ಯುವಕರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಮೈಸೂರು: ನಾಯಿ ದಾಳಿಗೀಡಾದ ಚಿರತೆ ಮರಿ ರಕ್ಷಿಸಿದ ಯುವಕರು - leopard latest news
ಹುಣಸೂರು ತಾಲ್ಲೂಕಿನ ಮೈಲಾಂಬೂರು ಗ್ರಾಮದ ಜಮಿನೊಂದರಲ್ಲಿ ಚಿರತೆ ಮರಿ ಪ್ರತ್ಯಕ್ಷಗೊಂಡಿದೆ ತಕ್ಷಣ ಅಲ್ಲಿದ್ದ ನಾಯಿಗಳ ಹಿಂಡು ದಾಳಿ ಮಾಡಿ ಕಚ್ಚಿವೆ. ನಂತರ ಅದನ್ನು ಸ್ಥಳೀಯ ಯುವಕರು ರಕ್ಷಣೆ ಮಾಡಿದ್ದಾರೆ.
ಗ್ರಾಮಕ್ಕೆ ಬಂದ ಚಿರತೆ ಮರಿ ಮೇಲೆ ನಾಯಿಗಳ ಅಟ್ಯಾಕ್
ಹುಣಸೂರು ತಾಲ್ಲೂಕಿನ ಮೈಲಾಂಬೂರು ಗ್ರಾಮದ ಜಮೀನೊಂದರಲ್ಲಿ ಚಿರತೆ ಮರಿ ಪ್ರತ್ಯಕ್ಷಗೊಂಡಿದೆ. ತಕ್ಷಣ ಅಲ್ಲಿದ್ದ ನಾಯಿಗಳ ಹಿಂಡು ಅದರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿವೆ.
ಜಮೀನಿಗೆ ತೆರಳುತ್ತಿದ್ದ ಯುವಕರು ಚಿರತೆ ಮರಿ ಮೇಲೆ ಮುಗಿ ಬಿದ್ದಿದ್ದ ನಾಯಿಗಳನ್ನು ಓಡಿಸಿ. ಮರಿಯನ್ನು ಹುಣಸೂರು ಅರಣ್ಯ ವಲಯಕ್ಕೆ ನೀಡಿದ್ದಾರೆ. ಚಿರತೆ ಮರಿಗೆ ಚಿಕಿತ್ಸೆ ನೀಡಿ ಅದು ಚೇತರಿಸಿಕೊಂಡ ನಂತರ ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.