ಕರ್ನಾಟಕ

karnataka

ತಮ್ಮ ಪಕ್ಷದ ಅಭ್ಯರ್ಥಿ ಬೆಂಬಲಿಸುವಂತೆ ಬಿಎಸ್​ವೈ, ಸಿದ್ದರಾಮಯ್ಯ ಕೇಳಿದ್ರು: ಜಿಟಿಡಿ

ಉಪ ಚುನಾವಣೆಯ ಹುಣಸೂರು ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ನನ್ನನ್ನು ಕೇಳಿದ್ದರು ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

By

Published : Nov 25, 2019, 7:09 PM IST

Published : Nov 25, 2019, 7:09 PM IST

ಜಿ.ಟಿ. ದೇವೇಗೌಡ

ಮೈಸೂರು: ಹುಣಸೂರಲ್ಲಿ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಸಿಎಂ ಬಿ.ಎಸ್​.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ನನ್ನನ್ನು ಕೇಳಿದ್ದರು.‌ ಆದರೆ ನಾನು ತಟಸ್ಥನಾಗಿರುತ್ತೇನೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಮಾಜಿ ಸಚಿವ ಜಿ.ಟಿ.ದೇವೇಗೌಡ

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಣಸೂರು ಉಪ ಚುನಾವಣೆಯ ಸಂಬಂಧ ತಮ್ಮ ಪಕ್ಷವನ್ನು ಬೆಂಬಲಿಸುವಂತೆ ಸಿಎಂ ಯಡಿಯೂರಪ್ಪ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ. ಆದರೆ ಜೆಡಿಎಸ್​​ನ ವರಿಷ್ಠರು ನಮ್ಮನ್ನು ಈ ವಿಚಾರದಲ್ಲಿ ಭೇಟಿ ಮಾಡಲು ಯತ್ನಿಸಿದರು. ಆದರೆ ನನಗೆ ಮನಸ್ಸಿಗೆ ತುಂಬಾ ನೋವಾಗಿದೆ.‌ ಆದ್ದರಿಂದ ಈ ಚುನಾವಣೆಯಲ್ಲಿ ತಟಸ್ಥನಾಗಿರುತ್ತೇನೆ ಎಂದು ಹೇಳಿದೆ. ಅದರಂತೆ ನಾನು ಜೆಡಿಎಸ್ ಶಾಸಕನಾಗಿರುವುದರಿಂದ ತಟಸ್ಥನಾಗಿರುತ್ತೇನೆ ಎಂದರು.

ಶ್ರೀರಾಮುಲು ಭೇಟಿಗೆ ಯಾವುದೇ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದ ಜಿಟಿಡಿ, ನನಗೆ ಜೆಡಿಎಸ್ ಯಾವಾಗಲೂ ನಾಯಕತ್ವ ಕೊಟ್ಟಿಲ್ಲ. ನಾನೇ ನಾಯಕತ್ವ ತೆಗೆದುಕೊಂಡು ಇಲ್ಲಿಯವರೆಗೆ ಕೆಲಸ ಮಾಡಿದ್ದೇನೆ.‌ ಈ ಭಾಗದಲ್ಲಿ ಸಾ.ರಾ.ಮಹೇಶ್ ನಾಯಕರಾಗಿ ಬೆಳೆಯಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ರು.

ABOUT THE AUTHOR

...view details