ಮೈಸೂರು:ಮರಾಠ ಪ್ರಾಧಿಕಾರ ರಚನೆ ಹಿಂಪಡೆಯಬೇಕು ಎಂದು ಡಿ.5 ರಂದು ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ಗೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಡಿ.5ರ ಬಂದ್ಗೆ ಬೆಂಬಲ ಸೂಚಿಸಿದ ಶಾಸಕ ಯತೀಂದ್ರ - ಡಿಸೆಂಬರ್ 5 ಕ್ಕೆ ನಡೆಸಲಿರುವ ಕರ್ನಾಟಕ ಬಂದ್
ಕನ್ನಡ ಸಂಘಟನೆಗಳು ಡಿಸೆಂಬರ್ 5 ಕ್ಕೆ ನಡೆಸಲಿರುವ ಕರ್ನಾಟಕ ಬಂದ್ ನಮ್ಮ ಸಹಮತವಿದೆ. ಒಂದು ಸಮುದಾಯಕ್ಕೆ ಪ್ರಾಧಿಕಾರ ಮಾಡಲು ಹೊರಟರೆ ಎಲ್ಲ ಸಮುದಾಯಗಳು ಕೇಳುತ್ತವೆ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಿ. ನರಸೀಪುರ ತಾಲ್ಲೂಕಿನ ಮಿನಿ ವಿಧಾನಸೌಧ ಕಚೇರಿಯಲ್ಲಿ ವರುಣಾ ಕ್ಷೇತ್ರ ವ್ಯಾಪ್ತಿಯ ಪಿಡಿಒಗಳ ಜೊತೆ ಸಭೆ ಹಾಗೂ ಸಾರ್ವಜನಿಕರ ಬಳಿ ಅಹವಾಲು ಸ್ವೀಕರಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕನ್ನಡ ಸಂಘಟನೆಗಳು ಡಿಸೆಂಬರ್ 5 ಕ್ಕೆ ನಡೆಸಲಿರುವ ಕರ್ನಾಟಕ ಬಂದ್ ನಮ್ಮ ಸಹಮತವಿದೆ. ಒಂದು ಸಮುದಾಯಕ್ಕೆ ಪ್ರಾಧಿಕಾರ ಮಾಡಲು ಹೊರಟರೆ ಎಲ್ಲ ಸಮುದಾಯಗಳು ಕೇಳುತ್ತವೆ. ಅಲ್ಲದೇ ಪ್ರಾಧಿಕಾರ ರಚನೆ ಮಾಡಲು ಕೆಲ ನಿಯಮಗಳಿವೆ ಎಂದರು.
ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಪ್ರಾಧಿಕಾರ ಮಾಡಿದರೆ ಉತ್ತಮ. ಚುನಾವಣೆ ಸಮಯದಲ್ಲಿ ಒಂದು ಸಮುದಾಯವನ್ನು ಓಲೈಕೆ ಮಾಡಲು ಪ್ರಾಧಿಕಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.