ಕರ್ನಾಟಕ

karnataka

ETV Bharat / state

ಜನರತ್ತ ತಿರುಗಿ ನೋಡದಿರುವುದು ಜನನಾಯಕನ ಲಕ್ಷಣವಲ್ಲ: ಡಾ. ಯತೀಂದ್ರ ಸಿದ್ದರಾಮಯ್ಯ - t narasipura news

ಲಾಕ್​ಡೌನ್​ ಹಿನ್ನೆಲೆ ಮೂಲಭೂತ ಸಮಸ್ಯೆಗಳಿಂದ ಬಳಲುತ್ತಿರುವ ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿವಾಸಿಗಳು, ಮಂಗಳ ಮುಖಿಯರು ಅಲ್ಲದೆ ಇವರ ಜೊತೆಗೆ ಅಂತರ ರಾಜ್ಯದಿಂದ ಕಬ್ಬು ಕಟಾವು ಮಾಡಲು ಬಂದು ನಿರಾಶ್ರಿತರಾಗಿರುವವರು ಸೇರಿದಂತೆ ಸುಮಾರು 200 ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಿದರು.

ಡಾ. ಯತೀಂದ್ರ ಸಿದ್ದರಾಮಯ್ಯ
ಡಾ. ಯತೀಂದ್ರ ಸಿದ್ದರಾಮಯ್ಯ

By

Published : Apr 8, 2020, 12:31 PM IST

Updated : Apr 8, 2020, 1:44 PM IST

ಮೈಸೂರು: ವರುಣ ಕ್ಷೇತ್ರದ ಬಡವರಿಗೆ,ನಿರ್ಗತಿಕರಿಗೆ ಹಾಗೂ ಮಂಗಳಮುಖಿಯರಿಗೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಆಹಾರ ಕಿಟ್ ಗಳನ್ನು ವಿತರಣೆ ಮಾಡಿದರು.

ತಿ.ನರಸೀಪುರ ತಾಲೂಕು ಕಚೇರಿ ಬಳಿ ಬಿಪಿಎಲ್ ಕಾರ್ಡ್​ ಇಲ್ಲದ ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿವಾಸಿಗಳು, ಮಂಗಳ ಮುಖಿಯರು ಅಲ್ಲದೆ ಇವರ ಜೊತೆಗೆ ಅಂತರ ರಾಜ್ಯದಿಂದ ಕಬ್ಬು ಕಟಾವು ಮಾಡಲು ಬಂದು ನಿರಾಶ್ರಿತರಾಗಿರುವವರು ಸೇರಿದಂತೆ ಸುಮಾರು 200 ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಿದರು.

ಡಾ. ಯತೀಂದ್ರ ಸಿದ್ದರಾಮಯ್ಯ

ನಂತರ ಮಾತನಾಡಿದ ಅವರು,ಜನ ಪ್ರತಿನಿಧಿ ಆದವರು ಜನರ ಮಧ್ಯೆ ಇದ್ದು ಕೆಲಸ ಮಾಡಿದಾಗ ಮಾತ್ರ ಜನ ಪ್ರತಿನಿಧಿ ಎಂಬ ಪದಕ್ಕೆ ಅರ್ಥ ಸಿಗುತ್ತದೆ. ಜನರಿಗೂ ನಮ್ಮ ಮೇಲೆ ವಿಶ್ವಾಸ ನಂಬಿಕೆ ಬರುತ್ತೆ. ಚುನಾವಣೆ ಸಂದರ್ಭದಲ್ಲಿ ಜನರ ಬಳಿ ಹೋಗಿ ಅವರಿಗೆ ಭರವಸೆಗಳನ್ನ ನೀಡಿ ಅವರಿಂದ ಮತ ಪಡೆದು ಅಧಿಕಾರದ ಗದ್ದುಗೆ ಏರಿದ ನಂತರ ಮತ್ತೆ ಜನರತ್ತ ತಿರುಗಿ ನೋಡದೆ ಇರುವುದು ಜನ ನಾಯಕನ ಲಕ್ಷಣವಲ್ಲ. ಸದಾ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಅವರ ಮಧ್ಯ ಇದ್ದು ಕೆಲಸ ಮಾಡುವುವನೆ ನಿಜವಾದ ಜನ ನಾಯಕ ನಾನು ಚುನಾವಣಾ ಸಂದರ್ಭದಲ್ಲಿ ನುಡಿದಂತೆ ಇಂದು ನಡೆಯುತ್ತಿದ್ದೇನೆ ಎಂದರು.

Last Updated : Apr 8, 2020, 1:44 PM IST

ABOUT THE AUTHOR

...view details