ಮೈಸೂರು: ಜಿಲ್ಲೆಯಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡುವುದು ಅಗತ್ಯ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಇಂದು ಮೈಸೂರಿನ ಶಕ್ತಿ ಧಾಮದಲ್ಲಿ ಕಲಿಸು ಫೌಂಡೇಶನ್ ಹಮ್ಮಿಕೊಂಡಿದ್ದ ಗ್ರಂಥಾಲಯ ಉದ್ಘಾಟಿಸಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಣೆ ಮಾಡಬೇಕು. ಅರಮನೆಯ ಕೋಟೆ ಗೋಡೆಗಳು ಶಿಥಿಲಗೊಂಡಿರುವ ಬಗ್ಗೆ ಮೊದಲೇ ವರದಿಯಾಗಿತ್ತು. ಆದರೆ, ದುರಸ್ಥಿಗೂ ಮೊದಲೇ ಕೋಟೆ ಗೋಡೆ ಕುಸಿದು ಬಿದ್ದಿದೆ. ಕುಸಿದಿರುವ ಅರಮನೆ ಕೋಟೆಯನ್ನು ಬೇಗ ದುರಸ್ಥಿ ಮಾಡಬೇಕು ಎಂದರು.
ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು ಶಕ್ತಿ ಧಾಮದಲ್ಲಿ ಗ್ರಂಥಾಲಯ ಸ್ಥಾಪನೆ:75 ನೇ ಸ್ವಾತಂತ್ರ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕಲಿಸು ಫೌಂಡೇಶನ್ 75 ನೇ ಗ್ರಂಥಾಲಯ ಸ್ಥಾಪನೆ ಮಾಡಿರುವುದು ಹೆಮ್ಮೆಯ ವಿಷಯ. ಗ್ರಂಥಾಲಯವನ್ನು ರಾಜವಂಶಸ್ಥರು ಉದ್ಘಾಟನೆ ಮಾಡಿರುವುದು ಹೆಮ್ಮೆ ತಂದಿದೆ. ಶಕ್ತಿ ಧಾಮದ ಮಕ್ಕಳಿಗೆ ನಾನು ಪಾಠ ಮಾಡುತ್ತೇನೆ ಎಂದೂ ರಾಜವಂಶಸ್ಥರು ಹೇಳಿರುವುದು ನಮ್ಮ ಸೌಭಾಗ್ಯ ಎಂದು ನಟ ಶಿವರಾಜ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.
ಶಕ್ತಿಧಾಮದ ಆವರಣದಲ್ಲಿ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಶಕ್ತಿಧಾಮದ ಟ್ರಸ್ಟಿ ಗೀತಾ ಶಿವರಾಜ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಕುಸಿತ: ಮೂವರು ಪ್ರಾಣಾಪಾಯದಿಂದ ಪಾರು