ಮೈಸೂರು: ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇಂದು ವಿದ್ಯಾದೇವತೆ ಸರಸ್ವತಿ ಪೂಜೆಯನ್ನು ನೆರವೇರಿಸಿದರು.
ಅರಮನೆಯಲ್ಲಿ ಸಾಂಪ್ರದಾಯಿಕ ಸರಸ್ವತಿ ಪೂಜೆ ನೆರವೇರಿಸಿದ ಯದುವೀರ್ - ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಜೊತೆಗೆ ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಯದುವೀರ್ ಅವರು ನಾಡಿನ ಸಮಸ್ತ ಜನತೆಗೆ ಸರಸ್ವತಿ ಪೂಜೆಯ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದರು..
ಸರಸ್ವತಿ ಪೂಜೆ ನೆರವೇರಿಸಿದ ಯದುವೀರ್
ನವರಾತ್ರಿಯ 5ನೇ ದಿನ ಇಂದು ಅರಮನೆಯ ಕನ್ನಡ ತೊಟ್ಟಿಯಲ್ಲಿ ವಿದ್ಯಾ ದೇವತೆಯಾದ ಸರಸ್ವತಿಗೆ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 9.45ರಿಂದ 10.15ರವರೆಗಿನ ಶುಭ ಮುಹೂರ್ತದಲ್ಲಿ ತಾಯಿ ಸರಸ್ವತಿಯ ಪುರಾತನ ಫೋಟೋ ಮುಂದೆ ವೀಣೆ, ಪುಸ್ತಕಗಳಿಗೆ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದ್ದು ವಿಶೇಷವಾಗಿದೆ.
ಜೊತೆಗೆ ಇಂದು ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಯದುವೀರ್ ಅವರು ನಾಡಿನ ಸಮಸ್ತ ಜನತೆಗೆ ಸರಸ್ವತಿ ಪೂಜೆಯ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದರು.