ಮೈಸೂರು: ಕಬಿನಿ ಜಲಾಶಯಕ್ಕೆ ಸಿಎಂ ಯಡಿಯೂರಪ್ಪ ಬಾಗಿನ ಅರ್ಪಣೆ ಮಾಡಿದರು. ಇದೇ ವೇಳೆ ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಬಗ್ಗೆ ನಿನ್ನೆ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದೇನೆ ಎಂದು ಸಿಎಂ ಹೇಳಿದ್ದಾರೆ.
ಇಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ರಾಜ್ಯದ ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿವೆ. ಕೆಆರ್ಎಸ್ ಮತ್ತು ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಕೊಡಲು ಸಮಸ್ಯೆ ಇಲ್ಲ. ಒಂದು ರೀತಿ ನೆಮ್ಮದಿಯಾಗಿದೆ. ಇವತ್ತು ರಾಜ್ಯದಲ್ಲಿ ಅತಿವೃಷ್ಟಿಯಿಂದ 1 ಲಕ್ಷ ಮನೆಗಳು ಹಾನಿಯಾಗಿವೆ. ಕೇಂದ್ರದ ನಿಯೋಗ ಬಂದು ಹೋಗಿದೆ. ಸದ್ಯದಲ್ಲೇ ಒಳ್ಳೆಯ ಪರಿಹಾರ ಕೊಡುತ್ತಾರೆ ಎಂದು ಸಿಎಂ ಬಿಎಸ್‌ವೈ ಭರವಸೆ ವ್ಯಕ್ತಪಡಿಸಿದರು.