ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ಗರ್ಭ ಗುಡಿಯ ಮುಂದೆ 20 ನಿಮಿಷಗಳ ಕಾಲ ಏಕಾಂತದಲ್ಲಿ ಕುಳಿತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರ ಜೊತೆ ಪೂಜೆ ಸಲ್ಲಿಸಿದರು.
ಶ್ರೀಕಂಠೇಶ್ವರ ಸನ್ನಿಧಿಯಲ್ಲಿ 20 ನಿಮಿಷ ಧ್ಯಾನಸ್ಥರಾದ ಬಿಎಸ್ವೈ - kannadanews
ನಂಜನಗೂಡಿನ ಶ್ರೀಕಂಠೇಶ್ವರ ಗರ್ಭ ಗುಡಿಯ ಮುಂದೆ ಕುಳಿತು ಬಿ.ಎಸ್. ಯಡಿಯೂರಪ್ಪ ಪೂಜೆ ಸಲ್ಲಿಸಿದರು.
ಶ್ರೀಕಂಠೇಶ್ವರ ದೇವಸ್ಥಾನದಲ್ಲಿ 20 ನಿಮಿಷ ಬಿಎಸ್ವೈ ಪೂಜೆ
ನಿನ್ನೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಆಗಮಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಬೆಳಿಗ್ಗೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಪೂಜೆ ಸಲ್ಲಿಸುವ ಮುನ್ನ ಗರ್ಭಗುಡಿಯ ಮುಂಭಾಗದಲ್ಲಿ ಕುರ್ಚಿ ಹಾಕಿಕೊಂಡು 20 ನಿಮಿಷಗಳ ಕಾಲ ಏಕಾಂತ ಧ್ಯಾನ ಮಾಡಿ ಶ್ರೀಕಂಠೇಶ್ವರನಲ್ಲಿ ಬೇಡಿಕೊಂಡರು.
ಇಂದು ಕಾರಹುಣ್ಣಿಮೆ ಇರುವ ಪ್ರಯುಕ್ತ ಯಡಿಯೂರಪ್ಪ ಅವರು ಈ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಯಡಿಯೂರಪ್ಪ ಜೊತೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಹಾಜರಿದ್ದರು.