ಕರ್ನಾಟಕ

karnataka

ETV Bharat / state

ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ ನಿಧನಕ್ಕೆ ಹಳೆಯ ವಿಡಿಯೋ ಹಂಚಿ ಸಂತಾಪ ಸೂಚಿಸಿದ ರಾಜವಂಶಸ್ಥ ಯದುವೀರ್ - Yadavir Wodeyar Mourns

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್ ತಮ್ಮ 96 ನೇ ವಯಸ್ಸಿನಲ್ಲಿ ಗುರುವಾರ ರಾತ್ರಿ ಅರಮನೆಯಲ್ಲಿ ನಿಧನರಾಗಿದ್ದು, ಮೈಸೂರಿನ ರಾಜವಂಶಸ್ಥ ಯದುವೀರ್ ಒಡೆಯರ್ ಹಳೆಯ ವಿಡಿಯೋವನ್ನು ಹಂಚಿ ಸಂತಾಪ ಸೂಚಿಸಿದ್ದಾರೆ.

Yadavir Wodeyar Mourns The Death Of Queen Elizabeth
Yadavir Wodeyar Mourns The Death Of Queen Elizabeth

By

Published : Sep 9, 2022, 2:59 PM IST

Updated : Sep 9, 2022, 3:12 PM IST

ಮೈಸೂರು:ತೀವ್ರ ಅನಾರೋಗ್ಯದ ಕಾರಣ ಸೆಪ್ಟೆಂಬರ್ 08 ರಂದು ನಿಧನ ಹೊಂದಿದ ಇಂಗ್ಲೆಂಡ್ ರಾಣಿ ಎರಡನೇ ಎಲಿಜಬೆತ್​ಗೆ ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಳೆಯ ವಿಡಿಯೋವನ್ನು ಹಂಚಿ ಸಂತಾಪ ಸೂಚಿಸಿದ್ದಾರೆ.

ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ನಿನ್ನೆ ಅನಾರೋಗ್ಯ ಕಾರಣದಿಂದ ನಿಧನ ಹೊಂದಿದ್ದು ಹಳೆಯ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂತಾಪ ಸೂಚಿಸಿದ್ದಾರೆ. 1950 ದಶಕದ ಉತ್ತರಾರ್ಧದಲ್ಲಿ ರಾಣಿ ಎರಡನೇ ಎಲಿಜಬೆತ್ ಬೆಂಗಳೂರಿಗೆ ಬಂದಿದ್ದರು. ಅಂದಿನ ರಾಜ್ಯಪಾಲರು ಹಾಗೂ ಮಾಜಿ ಮಹರಾಜ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಭೇಟಿಯಾಗಿದ್ದರು. ಅಂದಿನ ಕ್ಷಣಗಳನ್ನು ಯದುವೀರ್ ಒಡೆಯರ್ ಇಂದು ನೆನಪಿಸಿಕೊಂಡಿದ್ದಾರೆ.

ರಾಜವಂಶಸ್ಥ ಯದುವೀರ್

ಬ್ರಿಟನ್​​ನ ರಾಣಿ ಎರಡನೇ ಎಲಿಜಬೆತ್ ಅವರು ಬೆಂಗಳೂರಿಗೆ ಭೇಟಿ ನೀಡಿ ನನ್ನ ಅಜ್ಜ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ ಅವರೊಂದಿಗೆ ಸುತ್ತಾಡಿದ್ದು, ನಮಗೆ ನೆನಪಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಗಣೇಶ ನಿಮಜ್ಜನಕ್ಕೆ ನಿಯೋಜಿಸಿದ್ದ ಹೆಡ್ ಕಾನ್ಸ್‌ಟೇಬಲ್‌ಗೆ ಲಾಡ್ಜ್‌ನಲ್ಲಿ ಹೃದಯಾಘಾತ, ಸಾವು: ಸಿಸಿಟಿವಿ ದೃಶ್ಯ‌

Last Updated : Sep 9, 2022, 3:12 PM IST

ABOUT THE AUTHOR

...view details