ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ 2ನೇ ದಿನ ಅರಮನೆಯಲ್ಲಿ ಪೂಜಾ ಕೈಂಕರ್ಯದೊಂದಿಗೆ ಸಂಭ್ರಮ ಮನೆ ಮಾಡಿತು.
ಖಾಸಗಿ ದರ್ಬಾರ್ನ 2ನೇ ದಿನ ಬ್ರಹ್ಮಚಾರಿಣಿ ಪೂಜೆ ನೆರವೇರಿಸಿದ ಯದುವೀರ್ - ಬ್ರಹ್ಮಾಚಾರಿಣಿ ಪೂಜೆ ನೆರೆವೇರಿಸಿದ ಯದುವೀರ್
ನವರಾತ್ರಿಯ 2ನೇ ದಿನದ ಖಾಸಗಿ ದರ್ಬಾರ್ನಲ್ಲಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಂಬಾವಿಲಾಸ ಅರಮನೆಯಲ್ಲಿ ಬ್ರಹ್ಮಚಾರಿಣಿ ಪೂಜೆಯಲ್ಲಿ ನೆರವೇರಿಸಿದರು. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಒಂಟೆಗಳು ಪೂಜೆಯಲ್ಲಿ ಭಾಗಿಯಾಗಿದ್ದವು.
![ಖಾಸಗಿ ದರ್ಬಾರ್ನ 2ನೇ ದಿನ ಬ್ರಹ್ಮಚಾರಿಣಿ ಪೂಜೆ ನೆರವೇರಿಸಿದ ಯದುವೀರ್ brahmacharini worship](https://etvbharatimages.akamaized.net/etvbharat/prod-images/768-512-9218690-thumbnail-3x2-dhj.jpg)
ಬ್ರಹ್ಮಾಚಾರಿಣಿ ಪೂಜೆ
ನವರಾತ್ರಿಯ 2ನೇ ದಿನದ ಖಾಸಗಿ ದರ್ಬಾರ್ನಲ್ಲಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಂಬಾವಿಲಾಸ ಅರಮನೆಯಲ್ಲಿ ಬ್ರಹ್ಮಚಾರಿಣಿ ಪೂಜೆಯಲ್ಲಿ ನೆರವೇರಿಸಿದರು. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಮತ್ತು ಒಂಟೆಗಳು ಪೂಜೆಯಲ್ಲಿ ಭಾಗಿಯಾಗಿದ್ದವು.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ
ಅರಮನೆಯ ಆಗ್ನೇಯ ದಿಕ್ಕಿನಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಆನೆ, ಕುದುರೆ, ಹಸು ಪೂಜೆ ಸಲ್ಲಿಸಿ ಅರಮನೆಗೆ ಕರೆ ತರಲಾಯಿತು. ಕೇವಲ ಬೆರಳೆಣಿಕೆಯಷ್ಟು ಪೋರೋಹಿತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನದಂತೆ ಖಾಸಗಿ ದರ್ಬಾರ್ನಲ್ಲಿ ಪೂಜೆ ಪುನಸ್ಕಾರ ನಡೆಯಿತು.
Last Updated : Oct 18, 2020, 11:43 AM IST