ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ರಂಗೇರಿದ ಕುಸ್ತಿ: ರೋಚಕತೆ  ಸೃಷ್ಟಿಸಿದ  ಪಂದ್ಯ

ಮೈಸೂರಿನ ಡಿ.ದೇವರಾಜು ಅರಸು ವಿವಿದೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 95ನೇ ವರ್ಷದ ಮೈಸೂರು ಕರಗ ಮಹೋತ್ಸವದ ನಿಮಿತ್ತ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು.

ಮೈಸೂರಿನಲ್ಲಿ ನಡೆಯಿತು ರೋಚಕ ಕುಸ್ತಿ ಪಂದ್ಯ

By

Published : May 13, 2019, 9:42 AM IST

ಮೈಸೂರು : ಕುಸ್ತಿ ಪಂದ್ಯಾವಳಿ ಆಡಲು ಎಷ್ಟು ಬಲ ಬೇಕೋ ನೋಡಲು ಅಷ್ಟೇ ಹೃದಯ ಗಟ್ಟಿ ಇರಬೇಕು. ಹೌದು ಇಬ್ಬರು ಜಟ್ಟಿಗಳು ಕಾಳಗಕ್ಕೆ ಬಿದ್ದು ಸೆಣಸಾಡುವುದನ್ನು ನೋಡುವುದೆಂದರೆ ಮೈ ನವಿರೇಳುತ್ತದೆ. ಇಂತ ಕುಸ್ತಿ ಪಂದ್ಯ ಮೈಸೂರಿನಲ್ಲಿ ನಡೆದಿದ್ದು, ಸೇರಿದ ಕುಸ್ತಿ ಪ್ರೇಮಿಗಳಿಗೆ ರಸದೌತಣ ನೀಡಿದೆ.

ಮೈಸೂರಿನ ಡಿ.ದೇವರಾಜು ಅರಸು ವಿವಿದೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 95ನೇ ವರ್ಷದ ಮೈಸೂರು ಕರಗ ಮಹೋತ್ಸವದ ನಿಮಿತ್ತ ಈ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು.
ಈ ಪ್ಯಂವಳಿಯಲ್ಲಿ ಹೆಚ್ಚು ಗಮನ ಸೆಳೆದ ಪೈಲ್ವಾನರೆಂದರೆ, ವಿಷ್ಣಕೋಶೆ ಹಾಗೂ ಹರಿಯಾಣ ವ್ಯಾಯಾಮ ಶಾಲೆ ಪೈಲ್ವಾನ್ ಲಕ್ಕಿ. ಈ ಇಬ್ಬರ ನಡುವೆ ನಡೆದ ಪಂದ್ಯದಲ್ಲಿ ವಿಷ್ಣಕೋಶೆ ಲಕ್ಕಿಯವರನ್ನು ಜಿತ್ ಮಾಡಿ ಗೆಲುವು ಕಂಡರು.
ಇದಕ್ಕೂ ಮುನ್ನ ಪೈಲ್ವಾನ್​ ಪ್ರವೀಣ್ ಚಿಕ್ಕಳ್ಳಿ ಹಾಗೂ ಪೈಲ್ವಾನ್​ ನಾಗೇಶ್ ನಡುವೆ ನಡೆದ ಮಾರ್ಫಿಟ್ ಕುಸ್ತಿಯಲ್ಲಿ 20 ನಿಮಿಷ ಸೆಣಸಾಡಿ ಪ್ರವೀಣ್ ಚಿಕ್ಕಳ್ಳಿ ಗೆಲುವು ಕಂಡರು. ಇನ್ನು ಪಂದ್ಯದಲ್ಲಿ ದಾವಣಗೆರೆ ಕ್ರೀಡಾನಿಲಯ ಪೈಲ್ವಾನ್​ ಕಿರಣ್ ಭದ್ರವತಿ, ಪೈಲ್ವಾನ್​ ಪ್ರಕಾಶ್, ಮಹಾರಾಷ್ಟ್ರದ ಪೈಲ್ವಾನ್​ ಓಂಕಾರ ಬಾತ್ ಮಾರೆ, ಪೈಲ್ವಾನ್​ ಯಶ್ವಂತ್, ಪೈಲ್ವಾನ್, ​ಯೋಗೇಶ್, ತುಮಕೂರಿನ ಪೈಲ್ವಾನ್​ ಜಯಸಿಂಹ ಸೇರಿದಂತೆ ಹಲವು ಕ್ರೀಡಾ ಪಟುಗಳು ಭಾಗಿಯಾಗಿದ್ದರು.

ABOUT THE AUTHOR

...view details