ಮೈಸೂರು : ಹಾವಿನ ಬಗ್ಗೆ ಭಯ ಬೇಡ. ಅವು ಪ್ರಕೃತಿಯಲ್ಲಿ ಸಮತೋಲನಕ್ಕೆ ಇರುವ ಒಂದು ಪರಿಸರ ಸ್ನೇಹಿ ಎಂದು ಮೈಸೂರು ಮೃಗಾಲಯದಲ್ಲಿ ವಿಶ್ವ ಉರಗ ದಿನದ ಪ್ರಯುಕ್ತ ಶಾಲೆಯ ಮಕ್ಕಳಿಗೆ ಹಾವಿನ ಬಗ್ಗೆ ಅರಿವು ಮೂಡಿಸಲಾಯಿತು.
ವಿಶ್ವ ಉರಗ ದಿನಾಚರಣೆ.. ಪರಿಸರದ ಸಮತೋಲನಕ್ಕೆ ಹಾವುಗಳು ಬೇಕೇಬೇಕು.. - Kannada news
ಕೆಲವು ಜಾತಿಯ ಉರಗಗಳು ಅಳಿವಿನಂಚಿನಲ್ಲಿದ್ದು, ಇದಕ್ಕೆ ಹಾವು ಮತ್ತು ಮಾನವನ ನಡುವಿನ ಸಂಘರ್ಷವೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹಾವನ್ನು ರಕ್ಷಣೆ ಮಾಡಿದಿದ್ರೇ ಪರಿಸರದಲ್ಲಿ ಸಮತೋಲನ ಕಡಿಮೆಯಾಗುತ್ತದೆ.
ವಿಶ್ವ ಉರಗ ದಿನಾಚರಣೆ ಪ್ರಯುಕ್ತ ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಶಾಲಾ ಮಕ್ಕಳಿಗೆ ಉರಗ ತಜ್ಞರು ಹಾಗೂ ವೈದ್ಯರು ಹಾವಿನ ಬಗ್ಗೆ ತಿಳಿಸಿದರು.ಪರಿಸರ ಸಮತೋಲನಕ್ಕೆಹಾವು ಬೇಕೇಬೇಕು. ಜಗತ್ತಿನಲ್ಲಿ ಸರಿಸುಮಾರು 3 ಸಾವಿರ ವಿವಿಧ ಜಾತಿಯ ಉರಗಗಳಿವೆ.
ಭಾರತದಲ್ಲಿ ಒಟ್ಟು 4 ಜಾತಿಯ ವಿಷ ಪೂರಿತ ಹಾವುಗಳಿವೆ. ಕೆಲವು ಉರಗಗಳು ಅಷ್ಟೊಂದು ವಿಷ ಪೂರಿತ ಅಲ್ಲ, ಕೆಲ ಜಾತಿಯ ಉರಗಗಳು ಅಳಿವಿನಂಚಿನಲ್ಲಿದ್ದು, ಇದಕ್ಕೆ ಹಾವು ಮತ್ತು ಮಾನವನ ನಡುವಿನ ಸಂಘರ್ಷವೇ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಹಾವನ್ನು ರಕ್ಷಣೆ ಮಾಡಿದರೆ ಪರಿಸರದಲ್ಲಿ ಸಮತೋಲನ ಕಡಿಮೆಯಾಗುತ್ತದೆ ಎಂದು ಉರಗ ತಜ್ಞರು ಮಕ್ಕಳಿಗೆ ತಿಳಿಸಿದರು.