ಮೈಸೂರು:ಕೆಆರ್ಎಸ್ ಹಿನ್ನೀರಿಗೆ ಯುವತಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲವಾಲ ಬಳಿಯ ಸಾಗರಕಟ್ಟೆ ಬಿಡ್ಜ್ ಬಳಿ ನಡೆದಿದೆ.
ಕೆಆರ್ಎಸ್ ಹಿನ್ನೀರಿಗೆ ಹಾರಿ ಯುವತಿ ಆತ್ಮಹತ್ಯೆ: ಇಲವಾಲ ಪೊಲೀಸರಿಂದ ತನಿಖೆ - ಮೈಸೂರು ಸುದ್ದಿ
ಮೈಸೂರಿನ ಇಲವಾಲ ಬಳಿಯ ಸಾಗರಕಟ್ಟೆ ಬ್ರಿಡ್ಜ್ ಬಳಿಯ ಯುವತಿಯೋರ್ವಳು ಕೆಆರ್ಎಸ್ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವತಿ ಆತ್ಮಹತ್ಯೆ
ಗುಂಗ್ರಾಲ್ ಛತ್ರದ 18 ವರ್ಷದ ಯುವತಿ ಭಾವನ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತದೇಹವನ್ನು ಇಲವಾಲ ಪೊಲೀಸರು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ನಿಗೂಢವಾಗಿದ್ದು, ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.