ಮೈಸೂರು :ಬಾಳೆ ತೋಟದಲ್ಲಿ ಕಳೆ ಕೀಳುವ ಸಂದರ್ಭದಲ್ಲಿ ವಿದ್ಯುತ್ ತಂತಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ವರುಣಾ ಗ್ರಾಮದಲ್ಲಿ ನಡೆದಿದೆ.
ಕಳೆ ಕೀಳುವಾಗ ವಿದ್ಯುತ್ ತಂತಿ ಬಿದ್ದು ಮಹಿಳೆ ಸಾವು.. - ವಿದ್ಯುತ್ ತಂತಿ
ತೋಟದಲ್ಲಿ ಕಳೆ ಕೀಳುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ವರುಣಾ ಗ್ರಾಮದಲ್ಲಿ ನಡೆದಿದೆ.
Women died
ಗೌರಮ್ಮ(55) ಎಂಬುವರು ಮೃತ ಮಹಿಳೆ. ಗೌರಮ್ಮ ಬಾಳೆ ತೋಟದಲ್ಲಿದ್ದ ಅನಪೇಕ್ಷಿತವಾಗಿ ಬೆಳೆದಿದ್ದ ಕಳೆ ಕೀಳುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ತಂತಿ ಕೆಳಗೆ ಬಿದ್ದಿದೆ. ಪರಿಣಾಮ ವಿದ್ಯುತ್ ಸ್ಪರ್ಶದಿಂದ ಅಲ್ಲಿಯೇ ಬಿದ್ದು ಒದ್ದಾಡಿ ಗೌರಮ್ಮ ಸಾವನ್ನಪ್ಪಿದ್ದಾರೆ.
ಕಳೆದ ಮೂರ್ನಾಲ್ಕು ವರ್ಷದಿಂದ ವಿದ್ಯುತ್ ತಂತಿ ಬದಲಾವಣೆ ಮಾಡಿಕೊಡುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಈ ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ.