ಮೈಸೂರು:ಶಾದಿ ಡಾಟ್ ಕಾಂ ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದ ವಿಧವೆಯನ್ನು ವಿವಾಹವಾಗುವುದಾಗಿ ನಂಬಿಸಿ ವ್ಯಕ್ತಿಯೋರ್ವನು ಚಿನ್ನದ ಸರವನ್ನು ತೆಗೆದುಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ನಳಿನಿ ಎಂಬ ಮಹಿಳೆ ಶಾದಿ ಡಾಟ್ ಕಾಂನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಇವರ ವಿವರ ನೋಡಿದ ಚೆನ್ನೈ ಮೂಲದ ವಿನೀತ್ ರಾಜ್ ಆನ್ಲೈನ್ ಮೂಲಕ ಸಂಪರ್ಕಿಸಿ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದನು. ಬಳಿಕ ನಗರಕ್ಕೆ ಆಗಮಿಸಿದ ವಿನೀತ್ ಚಾಮುಂಡಿಬೆಟ್ಟದಲ್ಲಿ ಮದುವೆ ಮಾತುಕತೆ ನಡೆಸಿದ್ದನು.