ಕರ್ನಾಟಕ

karnataka

ETV Bharat / state

ಮೈಸೂರು: ಬೆತ್ತಲೆ ಫೋಟೋ ಕಳುಹಿಸಿ ಹಣ ಪೀಕುತ್ತಿದ್ದ ಸುಂದರಿ ಅಂದರ್ - ಬೆತ್ತಲೆ ಫೋಟೋ ಕಳುಹಿಸಿ ಬ್ಲಾಕ್​ಮೇಲ್​

ಯುವಕರಿಗೆ ಬೆತ್ತಲೆ ಫೋಟೋಗಳನ್ನು ಕಳುಹಿಸಿ, ಅವರನ್ನು ಬೆದರಿಸಿ ಹಣ ಪಡೆಯುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

collecting money by sending nude photos
ಬೆತ್ತಲೆ ಫೋಟೋ ಕಳುಹಿಸಿ ಹಣ ಪೀಕುತ್ತಿದ್ದ ಸುಂದರಿ

By

Published : Dec 18, 2022, 5:19 PM IST

ಮೈಸೂರು: ಬೆತ್ತಲೆ ಫೋಟೋ ಕಳುಹಿಸುವ ಮೂಲಕ ಅಮಾಯಕರನ್ನು ಬುಟ್ಟಿಗೆ ಬೀಳಿಸಿ, ಹಣ ಕೀಳುತ್ತಿದ್ದ ಖತರ್ನಾಕ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಮೂಲತಃ ಪಿರಿಯಾಪಟ್ಟಣ ತಾಲೂಕಿನವರಾಗಿದ್ದಾಳೆ.

ಮೈಸೂರಿನ ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿ ಮಸಾಜ್ ಸೆಂಟರ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ, ಡಿ.14ರಂದು ಸಿಸಿಬಿ ಹಾಗೂ ವಿಜಯನಗರ ಠಾಣಾ ಪೊಲೀಸರು ದಾಳಿ ನಡೆಸಿ ಈಕೆಯನ್ನು ಬಂಧಿಸಿದ್ದರು. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಇದನ್ನೂ ಓದಿ:ಬೆತ್ತಲೆ ಫೋಟೋಗಳನ್ನ ಕಳುಹಿಸಿ ಪತ್ನಿಯಿಂದಲೇ ಪತಿಗೆ ಬ್ಲಾಕ್​ ಮೇಲ್​​ !

ಬಂಧಿಸಿರುವ ಮಹಿಳೆಯನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಈಕೆಯ ಮತ್ತೊಂದು ಮುಖ ಪೊಲೀಸರಿಗೆ ಗೊತ್ತಾಗಿದೆ. ಯುವಕರನ್ನು ಬುಟ್ಟಿಗೆ ಬೀಳಿಸಿಕೊಂಡು ಹಣ ಕಿತ್ತು ಪರಾರಿಯಾಗುತ್ತಿದ್ದಳು ಎಂದು ತಿಳಿದುಬಂದಿದೆ. ವಾಟ್ಸಪ್ ಚಾಟ್ ಮಾಡಿ ತನ್ನ ಅರೆನಗ್ನ ಸ್ಥಿತಿಯ ಫೋಟೋಗಳನ್ನ ಕಳುಹಿಸುತ್ತಿದ್ದ ಈಕೆ, ಯುವಕರು ಬೆತ್ತಲೆ ಫೋಟೋವನ್ನು ಆಕೆಗೆ ಕಳುಹಿಸಿದಾಗ, ಅದನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಲ್ಲದೇ, ಈ ನಡುವೆ ಮೈಸೂರಿನಲ್ಲಿ ಪರಿಚಯಸ್ಥ ದಂಪತಿಯನ್ನು ಯಾಮಾರಿಸಿ ಲಕ್ಷ ರೂಪಾಯಿ ಹಣ ಪೀಕಿದ್ದಳು ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಹಣ ವಾಪಸ್ ಕೇಳೋಕೆ ಬಂದ ದಂಪತಿ ಮೇಲೆ ಹಲ್ಲೆ ಮಾಡಿ ಕಳುಹಿಸಿದ್ದಳು ಎಂಬ ಆರೋಪ ಸಹ ಕೇಳಿಬಂದಿದೆ.

ABOUT THE AUTHOR

...view details