ಮೈಸೂರು:ಕಳೆದ 15 ದಿನಗಳ ಹಿಂದೆ ರಾಯಚೂರು ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ, ಹೆಚ್.ಡಿ. ಕೋಟೆಯ ಯುವಕ ರಘು ಕೈಗೆ ಗಂಡು ಮಗು ಕೊಟ್ಟು ಪರಾರಿ ಆಗಿದ್ದರು. ಆ ಮಗುವನ್ನ ಯುವಕ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ, ಪೊಲೀಸರಿಗೊಪ್ಪಿಸಿದ್ದ. ಬಳಿಕ ಪೊಲೀಸರು ಮಗುವನ್ನ ಪುನರ್ವಸತಿ ಕೇಂದ್ರದಲ್ಲಿ ಬಿಟ್ಟಿದ್ದರು.
ತನಿಖೆ ಕೈಗೊಂಡಾಗ ಪೊಲೀಸರಿಗೆ ಆ ಮಗು ತಂದುಕೊಟ್ಟಿದ್ದ ರಘು ಹಾಗೂ ಆ ಮಗುವಿನ ತಾಯಿಯ ನಿಜವಾದ ಸಂಬಂಧ ಗೊತ್ತಾಗಿದೆ. ಮಗುವಿನ ತಾಯಿಗೆ ರಘು ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದು, ಕಳೆದ ಒಂದೂವರೆ ವರ್ಷದಿಂದ ಆತನಿಗೆ ರಾಯಚೂರಿನ ಮಹಿಳೆಯೊಂದಿಗೆ ಒಡನಾಟ ಇತ್ತು. ಇದು ಮಹಿಳೆಯ ಗಂಡನಿಗೂ ಕೂಡ ಗೊತ್ತಾಗಿತ್ತು. ಅವರ ಪ್ರೀತಿಗೆ ಅಡ್ಡಿಯಾಗುವ ಈ ಮಗುವನ್ನ ದೂರ ಮಾಡುವ ಪ್ಲ್ಯಾನ್ ಮಾಡಿ, ರಾಯಚೂರಿನ ಬಸ್ ಸ್ಟ್ಯಾಂಡ್ನಲ್ಲಿ ಅಪರಿಚಿತ ಮಹಿಳೆ ಮಗುವನ್ನ ಕೊಟ್ಟು ಹೋದಳು ಎಂಬ ಕಥೆಯನ್ನ ರಘು ಕಟ್ಟಿದ್ದ.