ಮೈಸೂರು:ಮಹಿಳೆಯೊಬ್ಬರು 9 ತಿಂಗಳ ಮಗುವನ್ನು ಯುವಕನ ಕೈಗೆ ಕೊಟ್ಟು ನಾಪತ್ತೆಯಾಗಿದ್ದು, ಬಳಿಕ ಯುವಕ ಕಂದಮ್ಮನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ. ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ತಾಯಿಯಿಂದ ಬೇರ್ಪಟ್ಟ ಮಗುವನ್ನು ಆರೈಕೆ ಮಾಡಿ, ಬಾಲಮಂದಿರಕ್ಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನ ಯುವಕ ರಘು ವೈಯಕ್ತಿಕ ಕೆಲಸಕ್ಕಾಗಿ ರಾಯಚೂರಿಗೆ ತೆರಳಿದ್ದ. ಕೆಲಸ ಮುಗಿಸಿ ಮೈಸೂರಿಗೆ ಹಿಂದಿರುಗಲೆಂದು ರಾಯಚೂರಿನ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ. ಈ ಸಂದರ್ಭದಲ್ಲಿ ಆತನ ಬಳಿ ಬಂದ ಮಧ್ಯವಯಸ್ಕ ಮಹಿಳೆಯೊಬ್ಬಳು ತನ್ನ ಬಳಿಯಿದ್ದ 9 ತಿಂಗಳ ಮಗುವನ್ನು ಆತನ ಕೈಗಿಟ್ಟು ಸ್ವಲ್ಪ ಹೊತ್ತು ನೋಡಿಕೊಳ್ಳಿ, ವಾಪಸ್ ಬರುತ್ತೇನೆ ಎಂದು ಹೇಳಿ ಹೋಗಿದ್ದಾಳೆ.