ಕರ್ನಾಟಕ

karnataka

ETV Bharat / state

ಆಟೋ-ಕಾರು ಭೀಕರ ಅಪಘಾತ: ಮಹಿಳೆ ಸಾವು, ಪತಿ-ಮಕ್ಕಳು ಗಂಭೀರ - etv bharat kannada

ನರಸೀಪುರ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ, ಮೂವರು ಗಂಭೀರ ಗಾಯಗೊಂಡಿದ್ದಾರೆ.

woman-dead-in-car-auto-accident-in-narasipura
ಆಟೋ-ಕಾರು ಭೀಕರ ಅಪಘಾತ: ಮಹಿಳೆ ಸಾವು, ಪತಿ-ಮಕ್ಕಳು ಗಂಭೀರ

By

Published : Jul 25, 2022, 10:39 AM IST

ಮೈಸೂರು:ಆಪೇ ಆಟೋ ಮತ್ತು ಓಮಿನಿ ಕಾರಿನ ನಡುವೆ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದೆ. ಮೈಸೂರಿನ ಜೆಪಿ ನಗರ ನಿವಾಸಿ ವಿಶಾಲಾಕ್ಷಿ (29) ಮೃತ ಮಹಿಳೆ.

ಅಪಘಾತದಲ್ಲಿ ಮೃತ ವಿಶಾಲಾಕ್ಷಿ ಪತಿ ಶಂಕರ್ ಹಾಗೂ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಪೇ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮಳವಳ್ಳಿ ತಾಲೂಕಿನ ನಂಜೇಗೌಡನಪುರ ಗ್ರಾಮಸ್ಥರಾದ ರಾಜು, ಮಣಿ, ರತ್ನಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತಕ್ಕೀಡಾದ ವಾಹನಗಳು

ಸ್ಥಳೀಯರ ಸಹಾಯದಿಂದ ಗಾಯಾಳುಗಳ ರಕ್ಷಣೆ‌ ಮಾಡಲಾಗಿದೆ. ಸ್ಥಳಕ್ಕೆ ಬನ್ನೂರು ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಶಂಕಿತ ಉಗ್ರ ಸೇರಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

ABOUT THE AUTHOR

...view details