ಮೈಸೂರು:ನಂಜನಗೂಡು ತಾಲೂಕು ಕಳಲೆ ಗ್ರಾಮದ ಕಾಲುವೆ ಏರಿ ರಸ್ತೆ ಮೇಲೆ ಮಹಿಳೆಯೊಬ್ಬರ ಶವ ಕಂಡು ಬಂದಿದೆ. ನನ್ನ ಮಗಳನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಮೃತಳ ತಾಯಿ ಆರೋಪಿಸಿದ್ದಾರೆ.
ಮೈಸೂರು ಜಿಲ್ಲೆಯ ಗ್ರಾಮವೊಂದರ 45 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಜನವರಿ 16 ರಂದು ಮನೆ ಬಿಟ್ಟಿದ್ದ ಸಿದ್ದಮ್ಮ ವಾಪಸ್ ಬಂದಿರಲಿಲ್ಲ. ತಾಯಿಗೆ ಈ ಮಾಹಿತಿ ತಲುಪಿದ್ದು, ಅಳಿಯ ನಾಗರಾಜ್ ಅವರನ್ನ ಮಹಿಳೆಯ ತಾಯಿ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ. ಮೃತ ತಾಯಿ ತನ್ನ ಮೊಮ್ಮಗನೊಂದಿಗೆ ಬೈಕ್ನಲ್ಲಿ ಕಳಲೆ ಗ್ರಾಮಕ್ಕೆ ಬಂದು ಹುಡುಕಾಟ ನಡೆಸುತ್ತಿದ್ದಾಗ ಜ. 17 ರಂದು ಮಗಳ ಮೃತದೇಹ ಕಾಲುವೆ ಏರಿ ಮೇಲೆ ಕಂಡು ಬಂದಿದೆ.
ಓದಿ:Maoists killed : ಗುಂಡಿನ ಚಕಮಕಿಯಲ್ಲಿ ಇಬ್ಬರು ಮಾವೋವಾದಿಗಳ ಸಾವು, ಓರ್ವ ಪೊಲೀಸ್ಗೆ ಗಾಯ
ಮಗಳು ಧರಿಸಿದ್ದ ಬಟ್ಟೆಗಳು ಅಸ್ತವ್ಯಸ್ತವಾಗಿ ಕಂಡು ಬಂದಿದೆ. ಈ ಹಿನ್ನೆಲೆ ಯಾರೋ ದುಷ್ಕರ್ಮಿಗಳು ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂದು ತಾಯಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ ಮತ್ತು ಸಿಬ್ಬಂದಿ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಬಳಿಕ ಪೊಲೀಸರು ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.