ಕರ್ನಾಟಕ

karnataka

ETV Bharat / state

'ತಂದೆಗೆ ಒಳ್ಳೆ ಮಗಳಾಗಲಿಲ್ಲ, ಗಂಡನಿಗ ತಕ್ಕ ಹೆಂಡತಿಯಾಗಲಿಲ್ಲ'; ಡೆತ್ ನೋಟ್ ಬರೆದು ಗೃಹಿಣಿ ಆತ್ಮಹತ್ಯೆ - mysore

ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗ ತಕ್ಕ ಹೆಂಡತಿಯಾಗಿಲ್ಲವೆಂದು ಡೆತ್ ನೋಟ್ ಬರೆದು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೋಹನ್ ಕುಮಾರಿ (32) ಮೃತ ದುರ್ದೈವಿ.

mysore
ಮೈಸೂರು

By

Published : Jul 24, 2021, 6:12 PM IST

ಮೈಸೂರು:ಲಾಕ್‌ಡೌನ್​​ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಗೃಹಿಣಿ ತಮ್ಮ ತಂದೆಗೆ ಡೆತ್ ನೋಟ್ ಪೋಸ್ಟ್ ಮಾಡಿ ಪತಿಯ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಎನ್.ಆರ್.ಮೊಹಲ್ಲಾದ ಟ್ಯಾಂಕ್ ರೋಡ್​​ನಲ್ಲಿ ನಡೆದಿದೆ.

ಮೋಹನ್ ಕುಮಾರಿ (32) ಮೃತ ದುರ್ದೈವಿ. ಚಾರ್ಟೆಡ್ ಅಕೌಂಟೆಂಟ್ ಒಬ್ಬರ ಬಳಿ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರಿ 2013ರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಉದಯ್ ಕುಮಾರ್ ಎಂಬುವರನ್ನ ಪ್ರೀತಿಸಿ ಮದುವೆ ಆಗಿದ್ದರು.

ಮೋಹನ ಕುಮಾರಿ ಸಾಕಷ್ಟು ಸಾಲದ ಸುಳಿಯಲ್ಲಿ ಸಿಲುಕಿದ್ದರು. ಲಾಕ್​​ಡೌನ್ ಹಿನ್ನೆಲೆ ಪತಿಗೂ ಆದಾಯ ಕಡಿಮೆ ಆಗಿತ್ತು. ಇದರಿಂದ ಮನನೊಂದಿದ್ದ ಮೋಹನ್ ಕುಮಾರಿ, ನಾನು ತಂದೆಗೆ ಒಳ್ಳೆಯ ಮಗಳಾಗಿಲ್ಲ, ಗಂಡನಿಗೂ ಒಳ್ಳೆಯ ಪತ್ನಿ ಆಗಿಲ್ಲವೆಂದು ಡೆತ್ ನೋಟ್​​ನಲ್ಲಿ ಬರೆದು, ಅದನ್ನು ನಾಯ್ಡು ನಗರದಲ್ಲಿರುವ ತಂದೆ ಮಹೇಂದ್ರ ಅವರಿಗೆ ಕಳುಹಿಸಿ ಮನೆಯಲ್ಲಿ ಒಂದು ಡೆತ್​​ ನೋಟ್​​ ಪ್ರತಿ ಇಟ್ಟು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ತಂದೆಗೆ ಡೆತ್ ನೋಟ್ ತಲುಪಿದ ನಂತರ ಎನ್.ಆರ್.ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರೊಂದಿಗೆ ಮಹೇಂದ್ರ ಮಗಳ ಮನೆಗೆ ಬಂದಾಗ ನೇಣುಬಿಗಿದ ಸ್ಥಿತಿಯಲ್ಲಿ ಪುತ್ರಿಯ ಶವ ಪತ್ತೆಯಾಗಿದೆ. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

ABOUT THE AUTHOR

...view details