ಮೈಸೂರು:ಮಾನಸಿಕ ಖಿನ್ನತೆ ಮತ್ತು ಅನಾರೋಗ್ಯದಿಂದ ಬೇಸತ್ತ ಮಹಿಳೆಯೊಬ್ಬರು ನಂಜನಗೂಡಿನ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ವಿಜಯನಗರದ ಮಹದೇವಪ್ಪ ಎಂಬುವರ ಪತ್ನಿ ಸವಿತಾ (48) ಮೃತ ದುರ್ದೈವಿ. ನಂಜುಂಡೇಶ್ವರ ದೇವಾಲಯದ ಹೆಜ್ಜಿಗೆ ಸೇತುವೆಯಿಂದ ನದಿಗೆ ಹಾರಿದ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಲು ಯತ್ನಿಸಿದ್ದರು. ಆದರೆ ಅಷ್ಟರಲ್ಲಿ ಮಹಿಳೆಯ ಪ್ರಾಣಪಕ್ಷಿ ಹಾರಿ ಹೋಗಿತ್ತು.