ಮೈಸೂರು: ದೇವರನಾಮ ಹಾಗೂ ಜನರ ಮುಗ್ಧತೆ ಬಂಡವಾಳ ಮಾಡಿಕೊಂಡ ಚಾಲಾಕಿ ಮಹಿಳೆಯೊಬ್ಬಳು, ತನ್ನನ್ನು ನಂಬಿದವರಿಗೆ 70 ಲಕ್ಷ ರೂಪಾಯಿ ಹಣ ವಂಚಿಸಿ ರಾತ್ರೋರಾತ್ರಿ ಏರಿಯಾ ಬಿಟ್ಟು ಪರಾರಿಯಾಗಿದ್ದಾಳೆ.
ಮೈಸೂರಿನ ಸಾತಗಳ್ಳಿ 1ನೇ ಹಂತದ ಬಡಾವಣೆಯಲ್ಲಿ ಒಂದು ವರ್ಷದ ಹಿಂದೆ ಬಾಡಿಗೆ ಮನೆಗೆ ಬಂದ ಹೇಮಲತಾ ಎಂಬಾಕೆ, ತನ್ನ ನಾಜೂಕು ಮಾತುಗಳಿಂದ ಲೋನ್ ಕೊಡಿಸುವುದಾಗಿ ನಂಬಿಸಿ ಹಣ ಏರಿಯಾದ ಮಹಿಳೆಯರಿಂದ ಹಣ ಪಡೆದಿದ್ದಳು. ಇದೀಗ ಹಣದೊಂದಿಗೆ ಅರ್ಧ ರಾತ್ರಿಯಲ್ಲಿ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾಳೆ.
ಹಣ ಕಳೆದುಕೊಂಡು ಕಂಗಾಲಾದ ಮಹಿಳೆಯರು ಈಕೆಯ ಮಾತಿಗೆ ಮರುಳಾಗಿ ಗಂಡ ಹಾಗೂ ಕುಟುಂಬಸ್ಥರಿಗೆ ತಿಳಿಯದೇ ಹಣ ಕೊಟ್ಟ ಮಹಿಳೆಯರು ಮಾತ್ರ ಕಂಗಾಲಾಗಿದ್ದಾರೆ. ಸಾತಗಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆಗೆ ವಾಸಕ್ಕೆ ಬಂದ ಹೇಮಲತಾ, ಮೊದ ಮೊದಲು ದೇವರಿಗೆ ಪೂಜೆ ಸಲ್ಲಿಸುವುದು, ದೇವಸ್ಥಾನಗಳನ್ನು ಸುತ್ತುವ ಮೂಲಕ ಸುತ್ತಮುತ್ತಲಿನ ಮಹಿಳೆಯರಿಗೆ ತನ್ನ ಮೇಲೆ ನಂಬಿಕೆ ಬರುವಂತೆ ಮಾಡಿದ್ದಳು. ತಾನು ಚೀಟಿ ವ್ಯವಹಾರ ನಡೆಸುವುದಾಗಿ ಹಾಗೂ ಬ್ಯಾಂಕ್ಗಳಲ್ಲಿ ಸುಲಭವಾಗಿ ಲೋನ್ ಕೊಡಿಸುವುದಾಗಿ ಅವರಿಗೆ ಹೇಳಿದ್ದಳು.
ಓದಿ : ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿ ಮಾಡಿದ ಆರೋಪ: ವ್ಯಕ್ತಿ ಬಂಧನ
ಇವರ ನಯವಂಚನೆಯ ಮರ್ಮ ಅರಿಯದ ಮಹಿಳೆಯರು ಚೀಟಿ ಹಾಗೂ ಲೋನ್ ವಿಚಾರವಾಗಿ 70 ಲಕ್ಷ ರೂ. ಹಣ ಕಟ್ಟಿ, ಈಗ ದಿಕ್ಕೇ ತೋಚದಂತಾಗಿದ್ದಾರೆ. ಹೇಮಲತಾ ವಂಚಕಿ ಎಂಬುವುದು ಹಣ ಕಳೆದುಕೊಂಡ ಮೇಲೆ ಮಹಿಳೆಯರಿಗೆ ಜ್ಞಾನೋದಯವಾಗಿದೆ. ಇದೀಗ ಹೇಮಲತಾ ಮತ್ತು ಈಕೆಯ ವಂಚನೆಗೆ ಸಾಥ್ ನೀಡಿದ ಶಿವನಂಜು ಎಂಬಾತನ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.